Advertisement

ಕಲುಗಣಿ ವಿರುದ್ಧ ರೈತರ ಕಿಡಿ

01:04 PM Sep 20, 2018 | |

ದೇವನಹಳ್ಳಿ: ತಾಲೂಕಿನ ತೈಲಗೆರೆ, ಸೊಣ್ಣೇನ ಹಳ್ಳಿ, ಮುದ್ದನಾಯಕನಹಳ್ಳಿ, ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಬೆಳೆಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ತಲೆನೋವಾಗಿದೆ ಎಂದು ಆರೋಪಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಗಣಿ ಮಾಲಿಕರ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಹತ್ತಾರು ವರ್ಷಗಳಿಂದ ಕೃಷಿ ನಂಬಿ ಜೀವನ ಸಾಗಿಸುತ್ತಿರುವ ರೈತರು ಇರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಸಾಕಷ್ಟು ಸಂಕಷ್ಟ ತಲೆ ದೋರಿದ್ದು ಕಲ್ಲುಗಳ ಸ್ಫೋಟದಿಂದ ಬೋರ್‌ವೆಲ್‌ಗ‌ಳಲ್ಲಿ ಬರುತ್ತಿದ್ದ ನೀರೂ ಬಾರದಾಗಿದೆ. ಜೆಲ್ಲಿ ಕ್ರಷರ್‌ಗಳ ಧೂಳಿನಿಂದ ರೈತರ ಬೆಳೆ ನಾಶವಾಗುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ದೊಡ್ಡ ಸ್ಫೋಟಕಗಳ ಬಳಕೆ : ರೈತ ಮುಖಂಡ ದೇವರಾಜ್‌ ಮಾತನಾಡಿ, ತೈಲಗೆರೆ, ಸೊಣ್ಣೇನ ಹಳ್ಳಿ, ಮುದ್ದನಾಯ ಕನಹಳ್ಳಿ ಸಮೀಪ ನೂರಾರು ಅಡಿ ಆಳದಲ್ಲಿ ಕಲ್ಲು ಕ್ವಾರಿ ಮಾಡಲಾ ಗುತ್ತಿದೆ. ಗಣಿ ಭೂ ವಿಜ್ಞಾನಿ ಇಲಾಖೆ ತೈಲಗೆರೆ
ಗ್ರಾಮದ ಸರ್ಕಾರಿ ಬಂಡೆಗಳಲ್ಲಿ ಕಲ್ಲು ಕ್ವಾರಿಗಳಷ್ಟೇ ಅನುಮತಿ ನೀಡಿದೆ. ಆದರೆ, ಕಲ್ಲು ಕ್ವಾರಿಗಳಷ್ಟೇ ಅನುಮತಿ ಪಡೆದಿರುವ ವ್ಯಕ್ತಿಗಳು ದೊಡ್ಡ ಮಟ್ಟದಲ್ಲಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ಅಕ್ಕ ಪಕ್ಕದ ಹಳ್ಳಿಗಳ ಜನರ ನಿದ್ದೆ ಕೆಡಿಸಿದ್ದಾರೆಂದರು.

ಕ್ರಮವಿಲ್ಲ: ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಸಂಬಂಧ ಪಟ್ಟ ಯಾವುದೇ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಅಕ್ರಮವಾಗಿ ಗಣಿಗಾರಿಕೆ: ಮುಖಂಡ ಮುನಿರಾಜು ಮಾತನಾಡಿ, ಕಳೆದ ಹತ್ತು ವರ್ಷಗ ಳಿಂದ ಸರ್ವೇ ನಂ 110ರಲ್ಲಿ ಸುಮಾರು 51 ಎಕರೆ ಪ್ರದೇಶದಲ್ಲಿ ಕೆಲವರು ಪರವಾನಿಗೆ ಪಡೆದು ಗಣಿಗಾರಿಕೆ ಮಾಡಿದ್ದಾರೆ. ಇನ್ನೂ
ಕೆಲವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿತ್ತಿದ್ದಾರೆ.

 ಇದರಿಂದ ಮನೆಗಳು ಬಿರುಕು ಬಿಡುತ್ತಿವೆ. ಅರ್ಕಾವತಿ ಕ್ಯಾಚ್‌ ಮೇಟ್‌ ಏರಿಯಾವಾಗಿದೆ. ಹೀಗಾಗಿ ಹಿಂದಿನಿಂದಲೂ ಇಲ್ಲಿನ ಗಣಿಗಾರಿಕೆ ನಿಲ್ಲಿಸುವಂತೆ ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸ ಬೇಕು ಎಂದು ಆಗ್ರಹಿಸಿದರು. ಈ ವೇಳೆಯಲ್ಲಿ ರೈತರಾದ ಮೋಹನ್‌, ಸುನೀಲ್‌, ಮುನಿರಾಜು, ರಾಜು ಇದ್ದರು.

Advertisement

10 ವರ್ಷದಿಂದ ಸಮಸ್ಯೆ ಸುಮಾರು 10 ವರ್ಷಗಳಿಂದಲೂ ಗಣಿ ಗಾರಿಕೆಯಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ. ಕೃಷಿ ಮತ್ತು ವ್ಯವಸಾಯವಲ್ಲದೇ ಬೇರೆ ಯಾವುದೇ ಉದ್ಯೋಗವಿಲ್ಲ. ಇದ ರಿಂದ ಬರುವ ಧೂಳಿನಿಂದ ದನಕರುಗಳು ಸಾಯುತ್ತಿವೆ. ಕಲ್ಲುಗಣಿಗಾರಿಕೆ ಸಿಡಿಮ ದ್ದುಗಳಿಂದಾಗಿ ಈಗಾಗಲೇ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಗಳಲ್ಲಿ ವಾಸಮಾಡಲು ಭಯ ಪಡು ವಂತಾಗಿದೆ. ಮನೆಗಳಲ್ಲಿರುವ ಪಾತ್ರೆ, ಸಾಮಾನುಗಳು ಅಲುಗಾಡುವ ಶಬ್ಧಕ್ಕೆ ಮಕ್ಕಳು ಗಾಬರಿಗೊಂಡು ಭಯಭೀತ ರಾಗುತ್ತಿದ್ದಾರೆ. ಅಲ್ಲದೆ ವಯಸ್ಸಾದ ವೃದ್ಧ ರು ಕೂಡಲೇ ಅಪಘಾತಕ್ಕೆ ಸಿಲುಕಿದ್ದಾರೆ ಎಂದು ರೈತ ಮುಖಂಡ ದೇವರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next