Advertisement

FIFA ಫುಟ್ ಬಾಲ್ ; ಇಂಗ್ಲೆಂಡ್ ಮಣಿಸಿ ಮೊದಲ ಮಹಿಳಾ ವಿಶ್ವಕಪ್ ಗೆದ್ದ ಸ್ಪೇನ್

06:11 PM Aug 20, 2023 | Team Udayavani |

ಸಿಡ್ನಿ: ಭಾನುವಾರ ನಡೆದ ರೋಚಕ ಫೈನಲ್‌ನಲ್ಲಿ ಓಲ್ಗಾ ಕಾರ್ಮೋನಾ ಅವರ ಮೊದಲಾರ್ಧದ ಅಮೋಘ ಗೋಲ್ ನೊಂದಿಗೆ ಸ್ಪೇನ್ ಇಂಗ್ಲೆಂಡ್ ವಿರುದ್ಧ 1-0 ಗೆಲುವಿನೊಂದಿಗೆ ಮೊದಲ ಬಾರಿಗೆ ಫಿಫಾ ಮಹಿಳಾ ಫುಟ್ ಬಾಲ್ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ.

Advertisement

ಎರಡೂ ತಂಡಗಳು ಮೊದಲ ಬಾರಿಗೆ ಫೈನಲ್‌ನಲ್ಲಿ ಆಡಿದ್ದು. ಈ ಗೆಲುವು ಸ್ಪ್ಯಾನಿಷ್ ಮಹಿಳೆಯರಿಗೆ ಅವರ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿ ಮುಡಿಗೇರಿಸುವಂತೆ ಮಾಡಿತು. ಕಳೆದ ವರ್ಷ UEFA ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಕ್ವಾರ್ಟರ್‌ಫೈನಲ್ ಸೋಲಿನ ಸೇಡು ತೀರಿಸಿಕೊಂಡಿತು.

ಇಂಗ್ಲೆಂಡ್‌ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿತ್ತು, 1966 ರ ನಂತರ ಮೊದಲ ಬಾರಿಗೆ ವಿಶ್ವಕಪ್ ಅನ್ನು ತರುವ ಗುರಿ ನುಚ್ಚುನೂರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next