Advertisement

ಮತ್ತೂಂದು ಸ್ಪೇಸ್‌ ಎಕ್ಸ್‌ ರಾಕೆಟ್‌ ಸ್ಫೋಟ

12:40 AM Mar 05, 2021 | Team Udayavani |

ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ರಾಕೆಟ್‌ ನಿರ್ಮಾಣ ಸಂಸ್ಥೆ ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಪರೀಕ್ಷಾ ಮಾದರಿಯ ರಾಕೆಟ್‌, ಅತ್ಯುನ್ನತ ಎತ್ತರದ ಪರೀಕ್ಷಾ ಹಾರಾಟ ಮುಗಿಸಿ, ಲ್ಯಾಂಡ್‌ ಆಗುವ ವೇಳೆ ಸ್ಫೋಟಗೊಂಡಿದೆ. ಮುಂದಿನ ಪೀಳಿಗೆಯ ವಾಹನವಾದ “ಎಸ್‌ಎನ್‌- 10′ ರಾಕೆಟ್‌, ಟೆಕ್ಸಾಸ್‌ನ ಬೊಕಾ ಚಿಕಾ ಎಂಬಲ್ಲಿ ಸುರಕ್ಷಿತವಾಗಿಯೇ ಇಳಿದಿತ್ತು. ಆದರೆ  ಕಾಂಕ್ರೀಟ್‌ ಲ್ಯಾಂಡಿಂಗ್‌ ಪ್ಯಾಡ್‌ ಮೇಲೆ ಇಳಿದ ಎಂಟೇ ನಿಮಿಷಗಳಲ್ಲಿ ಸ್ಫೋಟದಿಂದ ಛಿದ್ರವಾಗಿದೆ. ರ್ಯಾಪ್ಟರ್‌ ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದೆ.

Advertisement

3ನೇ ವೈಫ‌ಲ್ಯ: ಈಗಿರುವ ಫಾಲ್ಕನ್‌ ರಾಕೆಟ್‌ಗಳಿಗೆ ಪರ್ಯಾಯವಾಗಿ ಸುಧಾರಿತ ಮಾದರಿಯಲ್ಲಿ ನಿರ್ಮಿಸಲಾದ ಸ್ಟಾರ್‌ಶಿಪ್‌ ರಾಕೆಟ್‌ಗಳನ್ನು ಸರಣಿ ರೂಪದಲ್ಲಿ ಸ್ಪೇಸ್‌ ಎಕ್ಸ್‌ ಪರೀಕ್ಷೆಗೊಳಪಡಿಸುತ್ತಿದೆ. ಈಗಾಗಲೇ ಎಸ್‌ಎನ್‌-8, ಎಸ್‌ಎನ್‌-9 ಪರೀಕ್ಷೆ ಪೇಲವ ಅಂತನ್ನಿಸಿಕೊಂಡರೂ ಪ್ರಸ್ತುತ ಸ್ಫೋಟಗೊಂಡ ಎಸ್‌ಎನ್‌-9 ರಾಕೆಟ್‌ ವಾಹನ ನಿರೀಕ್ಷೆಗೂ ಮೀರಿ ಫ‌ಲಿತಾಂಶ ನೀಡಿದೆ. 50 ಮೀಟರ್‌ ಎತ್ತರದ ಈ ಸ್ಟಾರ್‌ಶಿಪ್‌ ರಾಕೆಟ್‌ ಕಕ್ಷೀಯ ಉಪಗ್ರಹಗಳನ್ನಲ್ಲದೆ, ಸಿಬಂದಿ- ಪ್ರಯಾಣಿಕರನ್ನೂ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಈ ರಾಕೆಟ್‌ ಬಳಸಿಯೇ 2023ರಲ್ಲಿ ಚಂದ್ರ, ಮಂಗಳನಲ್ಲಿ ಮಾನವನನ್ನು ಕರೆದೊಯ್ಯಲು ಮಸ್ಕ್ ಯೋಜಿಸಿದ್ದಾರೆ.

ಸ್ಪೇಸ್‌ ಎಕ್ಸ್‌ ಮೇಲೆ ಸಾಕಷ್ಟು ನಿರೀಕ್ಷೆ  :

ಮಸ್ಕ್ ಅವರು ತಮ್ಮ ಕನಸನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ಉದ್ಯಮಿಗಳು, ಈ ಆಕಾಶಕಾಯದಲ್ಲಿ ಮಂಗಳ ಅಥವಾ ಚಂದ್ರನನ್ನು ಸುತ್ತುವ ತವಕದಲ್ಲಿದ್ದಾರೆ. ಮೊನ್ನೆಯಷ್ಟೇ ಜಪಾನಿನ ಉದ್ಯಮಿಯೊಬ್ಬ, ಚಂದ್ರದಲ್ಲಿಗೆ ಹೋಗುವ ಸ್ಪೇಸ್‌ ಎಕ್ಸ್‌ನ ಆಕಾಶಕಾಯದಲ್ಲಿ ತಾನು 9 ಸೀಟುಗಳನ್ನು ಬುಕ್‌ ಮಾಡಿದ್ದು, ತನ್ನೊಂದಿಗೆ ಬರುವವರು ತನ್ನನ್ನು ಸಂಪರ್ಕಿಸಿ ಆಸನಗಳನ್ನು ಬುಕ್‌ ಮಾಡಿಕೊಳ್ಳಬಹುದು ಎಂದು ಜಗತ್ತಿನ ಎಲ್ಲ ರಾಷ್ಟ್ರಗಳ ನಾಗರಿಕರಿಗೆ ಆಫ‌ರ್‌ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next