Advertisement

Space: ಸಹಭಾಗಿತ್ವದ ನಿರೀಕ್ಷೆಯಲ್ಲಿ ಬಾಹ್ಯಾಕಾಶ ಸ್ಟಾರ್ಟಪ್‌ಗಳು

08:54 PM Jul 09, 2023 | Team Udayavani |

ನವದೆಹಲಿ: ಕಕ್ಷೆಯಲ್ಲೇ ಉಪಗ್ರಹಗಳಿಗೆ ಇಂಧನ ಮರುಪೂರಣ ಮಾಡುವುದರಿಂದ ಹಿಡಿದು ಭೂಮಿಯ ಆರೋಗ್ಯದ ಮೇಲ್ವಿಚಾರಣೆವರೆಗೆ ಭಾರತದ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್‌ಗಳು ಮುಂದಡಿಯಿಡುತ್ತಿದ್ದು, ಜಾಗತಿಕ ವಾಣಿಜ್ಯ ಸಹಯೋಗಗಳಿಗೆ ತೆರೆದುಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿವೆ.

Advertisement

ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚೆಗಿನ ಅಮೆರಿಕ ಪ್ರವಾಸದ ವೇಳೆ ಆರ್ಟಿಮಿಸ್‌ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ. ಇದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ರಫ್ತು ನಿಯಂತ್ರಣ, ತಂತ್ರಜ್ಞಾನ ವಿನಿಮಯ ಸೇರಿದಂತೆ ಹಲವು ಅವಕಾಶಗಳು ಒದಗಿಬರಲಿದ್ದು, ಇದು ಭಾರತದ ಖಾಸಗಿ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಲಿದೆ. ಇದೊಂದು ಉತ್ತಮ ಆರಂಭ. 10-15 ವರ್ಷಗಳ ಹಿಂದೆ ಅಮೆರಿಕವು ರಕ್ಷಣೆ ಅಥವಾ ಬಾಹ್ಯಾಕಾಶ ಸಂಬಂಧಿ ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಳ್ಳುವಂಥ ಯಾವ ಸಾಧ್ಯತೆಯೂ ಇರಲಿಲ್ಲ. ಆದರೆ ಈಗ ನಾವು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವತ್ತ ಹೆಜ್ಜೆಯಿಟ್ಟಿರುವುದು ಸಂತೋಷದ ಸಂಗತಿ ಎನ್ನುತ್ತಾರೆ ಮುಂಬೈ ಮೂಲದ ಸ್ಟಾರ್ಟಪ್‌ ಮನಸ್ತು ಸ್ಪೇಸ್‌ ಸಹಸ್ಥಾಪಕ ತುಷಾರ್‌ ಜಾಧವ್‌.

ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ದತ್ತಾಂಶಕ್ಕೆ ಬೇಡಿಕೆ ಕಡಿಮೆಯಿರುವ ಕಾರಣ, ಭಾರತದ ಖಾಸಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗಾಗಿ ಜಾಗತಿಕ ಮಾರುಕಟ್ಟೆಗಳನ್ನು ಎದುರು ನೋಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next