Advertisement

Space Scientist: ಭೂ ಕೆಳಕಕ್ಷೆ ಮುಚ್ಚುತ್ತಿರುವ 14,000 ಉಪಗ್ರಹ, ತ್ಯಾಜ್ಯ!

02:30 AM Dec 03, 2024 | Team Udayavani |

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚು­ತ್ತಿ­ರುವ ಉಪಗ್ರಹ ಉಡಾವಣೆಯ ಬಗ್ಗೆ ತಜ್ಞರ ತಂಡವೊಂದು ಕಳವಳ ವ್ಯಕ್ತಪಡಿ­ಸಿದ್ದು, ಮುಂದಿನ ದಿನಗಳಲ್ಲಿ ಭೂ ಕೆಳಕಕ್ಷೆ ನಿರುಪಯೋಗ ವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

Advertisement

ಸುಮಾರು 14,000 ಉಪಗ್ರಹಗಳು ಮತ್ತು 12 ಕೋಟಿ ಬಾಹ್ಯಾಕಾಶ ತಾಜ್ಯ ಭೂಮಿಯ ಕೆಳಕಕ್ಷೆಯಲ್ಲಿವೆ. ಇವುಗಳ ಸಂಖ್ಯೆ ಹೀಗೆ ಹೆಚ್ಚಳಗೊಂಡರೆ, ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಾಹ್ಯಾ ಕಾಶ ತಜ್ಞರು ಎಚ್ಚರಿಕೆ ನೀಡಿದ್ದಾರೆ.

3,000 ನಿಷ್ಕ್ರಿಯ ಉಪಗ್ರಹ ಸೇರಿ ಒಟ್ಟು 14,000 ಉಪಗ್ರಹಗಳು ಭೂ ಕೆಳಕಕ್ಷೆಯಲ್ಲಿ ಸುತ್ತುತ್ತಿವೆ. ಇದಲ್ಲದೇ 2 ಕೋಟಿಗೂ ಹೆಚ್ಚು ತ್ಯಾಜ್ಯ ಈ ಪ್ರದೇಶದ­ಲ್ಲಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ಹೆಚ್ಚಾಗು­ತ್ತಿದ್ದು, ಬಾಹ್ಯಾಕಾಶದ ಸುರಕ್ಷತೆಯ ಬಗ್ಗೆ ಎಚ್ಚರಿಕೆ ಬೇಕು ಎಂದು ಅಮೆರಿ­ಕದ “ಸ್ಲಿಂಗ್‌ ಶಾಟ್‌ ಏರೋಸ್ಪೇಸ್‌’ ಹೇಳಿದೆ.

ಜಾಗತಿಕ ಸಂವಹನಕ್ಕೆ ಈ ಕಕ್ಷೆಯಲ್ಲಿ ಉಪ ಗ್ರಹಗಳನ್ನು ನಿಯೋಜನೆ ಮಾಡು ವುದು ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಇಲ್ಲಿ ಉಪಗ್ರಹ ನಿಯೋ ಜಿಸಲು ಸಾಧ್ಯವಾಗದಿದ್ದರೆ ಇದು ಸಂವಹ­ನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next