Advertisement
ಮಂಗಳವಾರ ಉಡುಪಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಜಾರಿ ಮಾಡಿರುವ ಆಪರೇಶನ್ ಸನ್‌ಸೆಟ್ ಬೀಟ್‌ನಲ್ಲಿ ನಿರೀಕ್ಷಕರು, ಉಪ ನಿರೀಕ್ಷಕರು, ಮಹಿಳಾ ಪೊಲೀಸ್ ಸಿಬಂದಿ ಒಳಗೊಂಡ ತಂಡವು ಗಸ್ತು ತಿರುತ್ತದೆ ಎಂದರು.
Related Articles
Advertisement
ಟ್ರಾಫಿಕ್ ಸಮಸ್ಯೆಗೆ ಶೀಘ್ರ ಪರಿಹಾರ:ಟ್ರಾಫಿಕ್ ಸಮಸ್ಯೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ಕಲ್ಸಂಕ, ಕೆಎಂ ಮಾರ್ಗ, ಮಣಿಪಾಲ, ಶಿರಿಬೀಡು, ಅಂಬಲಪಾಡಿ, ಕರಾವಳಿ ಜಂಕ್ಷನ್‌ನಲ್ಲಿ ವಾರಾಂತ್ಯ, ವಿಶೇಷ ಸಂದರ್ಭಗಳಲ್ಲಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಕಲ್ಸಂಕ ವೃತ್ತಕ್ಕೆ ಕಾಯಕಲ್ಪ ನೀಡುವ ಕೆಲಸವಾಗುತ್ತಿದೆ. ನಗರಸಭೆ ಸಹಕಾರದಿಂದ ಮಣಿಪಾಲ ಸಹಿತ 12 ಕಡೆಗಳಲ್ಲಿ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್‌ಗಳು ಅಳವಡಿಕೆಯಾಗಲಿದೆ ಎಂದರು. ನಗರದ ಬಹುತೇಕ ವಾಣಿಜ್ಯ ಸಂಕೀರ್ಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ.
ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲದ, ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸದ ವಾಣಿಜ್ಯ ಸಂಕೀರ್ಣದ ಮಾಲಕರ ವಿರುದ್ಧ ಯಾರ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆ ಜತೆಗೆ ಚರ್ಚಿಸಲಿದ್ದೆವೆ. ನೋ ಪಾರ್ಕಿಂಗ್ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತದೆ ಎಂದರು. ಆನ್‌ಲೈನ್ ವಂಚನೆ ತತ್‌ಕ್ಷಣ ಮಾಹಿತಿ ನೀಡಿ
ಆನ್‌ಲೈನ್ ಮೂಲಕ ಒಟಿಪಿ ವಂಚಿಸಿ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾಯಿಸಿಕೊಂಡ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ತಡಮಾಡದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಜಿಲ್ಲಾ ಕೇಂದ್ರದ ಸೆನ್‌ಪೊಲೀಸ್ ಠಾಣೆಗೂ ಬರುವ ಮೊದಲೆ ಹತ್ತಿರದ ಠಾಣೆಗೆ ಮಾಹಿತಿ ನೀಡಿದಲ್ಲಿ ಸ್ಥಳೀಯ ಪೊಲೀಸರು ಸಂಬಂಧಪಟ್ಟ ಬ್ಯಾಂಕ್‌ನ್ನು ಸಂಪರ್ಕಿಸಿ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯಲು ಕ್ರಮ ಕೈಗೊಳ್ಳುತ್ತಾರೆ. ಶೀಘ್ರ ಹಣ ಖಾತೆಗೆ ಮರುಪಾವತಿಯಾಗುವಂತೆ ಮಾಡಲಾಗುತ್ತದೆ. ದೂರು ನೀಡಲು ವಿಳಂಬ ಮಾಡಬಾರದು ಮತ್ತು ಯಾರು ಕೂಡ ಬ್ಯಾಂಕ್ ಮತ್ತು ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಲಹೆ ನೀಡಿದರು. ಯುವಕರಿಗೆ ಎಸ್‌ಪಿ ಕರೆ :
ಜಿಲ್ಲೆಯ ಯುವಕರು ಪ್ರತಿಭಾನ್ವಿತರಾಗಿದ್ದಾರೆ, ಉಡುಪಿಯ ಯುವಕರು ಪೊಲೀಸ್ ಇಲಾಖೆ ಸೇರಬೇಕು. ಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪ್ರತಿ ವರ್ಷ ನೇಮಕಾತಿ ನಡೆಯುತ್ತಿರುತ್ತದೆ. ಉತ್ತಮ ಓದಿನ ಜತೆಗೆ, ಪರೀಕ್ಷೆಗೆ ತಯಾರಿ ನಡೆಸಬೇಕು. ಈ ಹುದ್ದೆಗಳು ಸಾಮಾಜಿಕ ಘನತೆ ಜತೆಗೆ ಉತ್ತಮ ವೇತನ, ಸೌಲಭ್ಯಗಳನ್ನು ಹೊಂದಿದೆ. ಇಲಾಖೆ ಸೇರಲು ಬೇಕಾದ ಮಾರ್ಗದರ್ಶನ ನೀಡಲು ಜಿಲ್ಲಾ ಪೊಲೀಸ್ ಇಲಾಖೆ ಸದಾ ಸಿದ್ಧವಿದೆ ಎಂದು ಜಿಲ್ಲೆಯ ಯುವಕರಿಗೆ ಪೊಲೀಸ್ ಇಲಾಖೆ ಸೇರಲು ಕರೆ ಕೊಟ್ಟರು.