Advertisement

ನಮ್ಮದೇ ನಿಜವಾದ ಎಸ್‌ಪಿ, ನಾನೇ ಅಧ್ಯಕ್ಷ: ಮುಲಾಯಂ

03:45 AM Jan 09, 2017 | Team Udayavani |

ಹೊಸದಿಲ್ಲಿ/ಲಕ್ನೋ: “ನಮ್ಮದೇ ನಿಜವಾದ ಸಮಾಜವಾದಿ ಪಕ್ಷ. ಪಕ್ಷಕ್ಕೆ ನಾನೇ ರಾಷ್ಟ್ರೀಯ ಅಧ್ಯಕ್ಷ. ಅಖೀಲೇಶ್‌ ಯಾದವ್‌ ಉತ್ತರಪ್ರದೇಶ ಮುಖ್ಯಮಂತ್ರಿ ಮಾತ್ರ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಹೇಳಿದ್ದಾರೆ.

Advertisement

ಮುಲಾಯಂ ಮತ್ತು ಅವರ ಆಪ್ತ ಅಮರ್‌ ಸಿಂಗ್‌ ಅವರು ಸೋಮವಾರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ತಮ್ಮದೇ ನಿಜವಾದ ಸಮಾಜವಾದಿ ಪಕ್ಷವಾಗಿದ್ದು ಸೈಕಲ್‌ ಚಿಹ್ನೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಅನುಮೋದನೆ ನೀಡಬೇಕು ಎಂದು ಮನವಿ ಮಾಡುವ ನಿರೀಕ್ಷೆ ಇದೆ. ಇದರ ಮುನ್ನಾ ದಿನವಾದ ರವಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಲಾಯಂ, “ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಗೋಪಾಲ್‌ ಯಾದವ್‌ ಅವರನ್ನು 6 ವರ್ಷದ ಅವಧಿಗೆ ಡಿ.30ರಂದೇ ಉಚ್ಚಾಟಿಸಿದ್ದೇನೆ. ಅವರು ಜ.1ರಂದು ನಡೆಸಿದ ಸಭೆ ಮತ್ತು ಅದರಲ್ಲಿ ಅಖೀಲೇಶ್‌ ರಾಷ್ಟ್ರೀಯ ಅಧ್ಯಕ್ಷ ಎಂದು ಕೈಗೊಂಡ ನಿರ್ಧಾರ ಸಂವಿಧಾನಬಾಹಿರ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next