Advertisement

SPB ಆರೋಗ್ಯ ಸ್ಥಿರ ; ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಗಾನ ಸಾಮ್ರಾಟ

08:12 PM Aug 31, 2020 | Hari Prasad |

ಚೆನ್ನೈ: ಕೋವಿಡ್ 19 ಸೋಂಕಿಗೆ ಒಳಗಾಗಿ ನಗರದ ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುಭಾಷಾ ಗಾಯಕ ಮತ್ತು ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡಿದೆ.

Advertisement

ಬಾಲಸುಬ್ರಹ್ಮಣ್ಯಂ ಅವರು ಇನ್ನೂ ವೆಂಟಿಲೇಟರ್ ಮತ್ತು ECMO ವ್ಯವಸ್ಥೆಯ ನಿಗಾದಲ್ಲೇ ಇದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಇಲ್ಲಿನ ವೈದ್ಯರ ತಂಡ ನಿಕಟವಾಗಿ ಗಮನಿಸುತ್ತಿದೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಇತ್ತೀಚಿನ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಎಸ್.ಪಿ.ಬಿ. ಅವರು ಎಚ್ಚರ ಸ್ಥಿತಿಯಲ್ಲಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮಾತ್ರವಲ್ಲದೆ ಪಿಸಿಯೋಥೆರಪಿ ಚಟುವಟಿಕೆಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಈ ರೀತಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಈ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಎಸ್.ಪಿ.ಬಿ. ಅವರ ಪುತ್ರ ಚರಣ್ ಅವರೂ ಸಹ ತಮ್ಮ ತಂದೆಯ ಆರೋಗ್ಯ ಸ್ಥಿತಿಯ ಕುರಿತಾಗಿ ಮಾಹಿತಿ ನೀಡಿದ್ದು, ತಂದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

‘ನನ್ನ ತಂದೆಯವರು ಈ ಪರಿಸ್ಥಿತಿಯಿಂದ ಬೆಗನೇ ಹೊರಬರುತ್ತಾರೆ ಎಂಬ ವಿಶ್ವಾಸ ನನಗಿದೆ. ಅದಕ್ಕೆಲ್ಲಾ ನಿಮ್ಮ ಪ್ರಾರ್ಥನೆ, ಹಾರೈಕೆಗಳೇ ಕಾರಣ. ಅವರ ದೇಹ ಸ್ಥಿತಿ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ’ ಎಂದು ಚರಣ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next