Advertisement

ಸ್ಟಾರ್ ನಟರಾದ ವಿಜಯ್ ದೇವರಕೊಂಡ, ಸಾಯಿ ಪಲ್ಲವಿ ಹುಟ್ಟುಹಬ್ಬ; ಟ್ವೀಟರ್ ನಲ್ಲಿ ಟ್ರೆಂಡಿಂಗ್

08:31 AM May 10, 2020 | Nagendra Trasi |

ನವದೆಹಲಿ:ದಕ್ಷಿಣ ಭಾರತದ ಜನಪ್ರಿಯ ನಟರಾದ ವಿಜಯ್ ದೇವರಕೊಂಡ ಹಾಗೂ ನಟಿ ಸಾಯಿ ಪಲ್ಲವಿಗೆ ಇಂದು (ಮೇ 9) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದೇವರಕೊಂಡ ಹಾಗೂ ಸಾಯಿ ಪಲ್ಲವಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಹುಟ್ಟುಹಬ್ಬವೂ ಟ್ರೆಂಡಿಂಗ್ ಆಗಿದೆ.

Advertisement

ಸಾಯಿ ಪಲ್ಲವಿ ಸೆಂಥಮರಾಯ್ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು, 2015ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ಸಿನಿಮಾ ಪ್ರೇಮಂನಲ್ಲಿ ನಟಿಸಿದ್ದಳು. ಪ್ರೇಮಂ ಸಿನಿಮಾದಲ್ಲಿನ ನಟನೆಗೆ ಸಾಯಿ ಪಲ್ಲವಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.

2016ರಲ್ಲಿ ಸಾಯಿ ಪಲ್ಲವಿ ದುಲ್ಖರ್ ಸಲ್ಮಾನ್ ಜತೆಗೆ Kali ಸಿನಿಮಾದಲ್ಲಿ ನಟಿಸಿದ್ದರೆ, 2017ರಲ್ಲಿ ತೆಲುಗಿನ Fidaa ಸಿನಿಮಾದಲ್ಲಿ ನಟನೆ, 2018ರಲ್ಲಿ ತಮಿಳಿನ ದಿಯಾ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿ ಮತ್ತಷ್ಟು ಜನಪ್ರಿಯರಾಗಿದ್ದರು. ಸಾಯಿ ಪಲ್ಲವಿ ವೈದ್ಯೆಯಾಗಿದ್ದು, 2016ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದರು. ಜಾರ್ಜಿಯಾ ಯೂನಿರ್ವಸಿಟಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು.

ತೆಲುಗಿನ ಸ್ಟಾರ್ ವಿಜಯ್ ದೇವರಕೊಂಡ 2011ರಲ್ಲಿ ಬಿಡುಗಡೆಯಾದ ನುವ್ವಿಲಾ ಸಿನಿಮಾದಲ್ಲಿ ನಟಿಸಿದ್ದರು. 2015ರಲ್ಲಿ ಬಿಡುಗಡೆಯಾಗಿದ್ದ ಯೆವ್ಡೆ ಸುಬ್ರಮಣ್ಯಂ ಸಿನಿಮಾದಲ್ಲಿನ ನಟನೆಯಿಂದ ವಿಜಯ್ ಜನಪ್ರಿಯರಾಗಿದ್ದರು. 2016ರ ಪೆಲ್ಲಿ ಚೂಪೂಲು ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. 2017ರಲ್ಲಿ ವಿಜಯ್ ದೇವರಕೊಂಡ ಸ್ಟಾರ್ ಆಗಿಬಿಟ್ಟಿದ್ದರು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿನ ನಟನೆಯಿಂದ ದೇವರಕೊಂಡ ಅಪಾರ ಜನಪ್ರಿಯರಾಗಿದ್ದಲ್ಲದೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next