Advertisement

ಹಿಮಾಲಯಕ್ಕೆ ಹೊರಟ ದಕ್ಷಿಣ ಕೊರಿಯಾದ ಬೌದ್ಧ ಬಿಕ್ಕು

07:37 AM Feb 26, 2019 | |

ಮೈಸೂರು: ಭಾರತದ ಅಧ್ಯಾತ್ಮಿಕತೆಗೆ ಮಾರು ಹೋಗಿರುವ ದಕ್ಷಿಣ ಕೊರಿಯಾ ಮೂಲದ 36 ವರ್ಷ ವಯಸ್ಸಿನ ಬೌದ್ಧ ಬಿಕ್ಕು (ನಾನ್‌) ಬೆಬ್‌ ಜಾನ್‌ ಸುನಿಮ್‌ ತಮ್ಮ ಮುಂದಿನ ಜೀವನವನ್ನು ಹಿಮಾಲಯದ ತಪ್ಪಲಲ್ಲಿ ಕಳೆಯಲು ನಿರ್ಧರಿಸಿದ್ದಾರೆ.

Advertisement

1984ರಲ್ಲಿ ಕಿಂಗ್‌ಸ್ಟನ್‌ನಲ್ಲಿ ಜನಿಸಿರುವ ಈಕೆ ಸಿಯೋಲ್‌ ಮತ್ತು ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ತನ್ನ 18ನೇ ವಯಸ್ಸಿಗೇ ಲಂಡನ್‌ನ ದೇವಾಲಯದಲ್ಲಿ ನ್ಯೂಹ್ಯಾಂಗ್‌ ಗುರುವಿನಿಂದ ನಾನ್‌ ದೀಕ್ಷೆ ಪಡೆದು 2002ರಿಂದ ಅಲ್ಲಿನ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಭಾರತದ ಅಧ್ಯಾತ್ಮಿಕ ಲೋಕದ ಸೆಳೆತ, ಯೋಗದ ಮಹತ್ವವನ್ನು ಅರಿತ ಸುನಿಮ್‌ ಮೈಸೂರಿಗೆ ಆಗಮಿಸಿ, ಮೈಸೂರಿನ ಗೋಕುಲಂನ ಕಾಂಟೂರು ರಸ್ತೆಯಲ್ಲಿರುವ ಎಸ್‌ಜಿಎಸ್‌ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡು ಒಂದು ತಿಂಗಳ ಕಾಲ ಯೋಗ ತರಬೇತಿ ಪಡೆದು,

ಸಂಶೋಧನೆ ಹಾಗೂ ಅಧ್ಯಯನ ನಡೆಸಿ, ಸಾಕಷ್ಟು ಪರಿಣಿತಿ ಪಡೆದಿರುವ ಸುನಿಮ್‌, ತಮ್ಮ ಜೀವನದ ಮುಂದಿನ ದಿನಗಳನ್ನು ಹಿಮಾಲಯದ ತಪ್ಪಲಲ್ಲಿ ಕಳೆಯಲು ನಿರ್ಧರಿಸಿದ್ದು, ಮಂಗಳವಾರ ಮೈಸೂರಿನಿಂದ ಹೊರಟು ನೇಪಾಳದ ಕಠ್ಮಂಡುವಿನ ಮೂಲಕ ಹಿಮಾಲಯದತ್ತ ಪಯಣ ಬೆಳೆಸುವುದಾಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಣ, ಆಸ್ತಿ ಸಂಪಾದನೆ, ಕೌಟುಂಬಿಕ ಜೀವನದಂತಹ ಭೌತಿಕ ಸುಖಗಳಿಂದ ದೂರವಿದ್ದು, ಮುಕ್ತಿ ಸಾಧನೆಗಾಗಿ ಸಮಾಧಿ ಸ್ಥಿತಿಗೆ ತಲುಪಬೇಕೆನ್ನುವುದು ನನ್ನ ಇಚ್ಛೆ. ಅದಕ್ಕಾಗಿ ಈ ಮಾರ್ಗವನ್ನು ಅನುಸರಿಸಿದ್ದೇನೆ. 18ನೇ ವಯಸ್ಸಿಗೆ ನಾನು ಅಧ್ಯಾತ್ಮದತ್ತ ಒಲವು ತೋರಿ, ಬೌದ್ಧ ಬಿಕ್ಕು (ನಾನ್‌) ಆಗಿದ್ದರಿಂದ ನನ್ನ ಇಚ್ಛೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

Advertisement

ಬುದ್ಧಿಸಂ ಹಾಗೂ ಹಿಂದೂ ಧರ್ಮದ ಮಧ್ಯೆ ಸಾಮ್ಯತೆ ಇರುವುದರಿಂದ ನನ್ನ ಆಧ್ಯಾತ್ಮಿಕ ಸಾಧನೆಗೆ ಭಾರತವನ್ನು ಆರಿಸಿಕೊಂಡಿದ್ದೇನೆ ಎಂದರು. ಎಸ್‌.ಜಿ.ಎಸ್‌ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಡಾ.ಎಂ.ನಿರಂಜನಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next