Advertisement

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

12:39 AM May 09, 2024 | Team Udayavani |

ಹೊಸದಿಲ್ಲಿ: ಪಿತ್ರಾರ್ಜಿತ ಆಸ್ತಿ ತೆರಿಗೆ ಹೇಳಿಕೆ ಮೂಲಕ ಭಾರೀ ವಿವಾದಕ್ಕೆ ನಾಂದಿ ಹಾಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್‌ ಪಿತ್ರೋಡಾ ಈಗ, ಭಾರತೀಯರನ್ನು ಚರ್ಮದ ಬಣ್ಣದ ಮೂಲಕ ವಿಂಗಡಿಸುವ ಹೇಳಿಕೆ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಈ ಸಂಬಂಧ ಬಿಜೆಪಿಯಂತೂ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರೆ, ಪಿತ್ರೋಡಾ ಹೇಳಿಕೆ ಯಿಂದ ಕಾಂಗ್ರೆಸ್‌ ಅಂತರ ಕಾಯ್ದು ಕೊಂಡಿದೆ.

Advertisement

ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಸ್ಯಾಮ್‌ ಪಿತ್ರೋಡಾ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

“ದಿ ಸ್ಟೇಟ್ಸ್‌ಮನ್‌’ ಇಂಗ್ಲಿಷ್‌ ಪತ್ರಿಕೆಗೆ ನೀಡಿದ ಪಾಡ್‌ಕಾಸ್ಟ್‌ ಸಂದರ್ಶನದಲ್ಲಿ ಸ್ಯಾಮ್‌ ಪಿತ್ರೋಡಾ ಭಾರತದ ವೈವಿಧ್ಯತೆಯನ್ನು ಬಣ್ಣಿಸುವ ಭರದಲ್ಲಿ ಭಾರತದ ಪೂರ್ವದಲ್ಲಿರುವವರು ಚೀನಿ ಯರ ರೀತಿ ಕಂಡರೆ, ಪಶ್ಚಿಮದಲ್ಲಿರು ವವರು ಅರಬ್ಬರ ರೀತಿ, ಉತ್ತರದಲ್ಲಿರು ವವರು ಬಿಳಿಯರು ಹಾಗೂ ದಕ್ಷಿಣ ಭಾರತದಲ್ಲಿರುವವರು ಆಫ್ರಿಕನ್ನರ ರೀತಿ ಕಾಣುತ್ತಾರೆ. ಭಾರತದಂಥ ವೈವಿಧ್ಯತೆಯ ದೇಶ ದಲ್ಲಷ್ಟೇ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ ಎಂದು ಹೇಳಿದ್ದಾರೆ.

ಪಿತ್ರೋಡಾ ಹೇಳಿಕೆಯು ಜನಾಂ ಗೀಯ ನಿಂದನೆ ಮತ್ತು ಅತ್ಯಂತ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿಗರು ಕಾಂಗ್ರೆಸ್‌ ವಿರುದ್ಧ ಕೆಂಡ ಕಾರಿದ್ದಾರೆ. ಮತ್ತೊಂದೆಡೆ, ಐಎನ್‌ಡಿಐಎ ಒಕ್ಕೂಟದ ಯಾವುದೇ ಪಕ್ಷವು ಪಿತ್ರೋಡಾ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು?
“ನಮ್ಮ ಸ್ವಾತ್ಯಂತ್ರ ಹೋರಾಟಗಾರರು ಬ್ರಿಟಿಷ್‌ ರಾಜ್‌ ವಿರುದ್ಧ ಹೋರಾಟ ಮಾಡಿದ್ದು ಜಾತ್ಯತೀತ ರಾಷ್ಟ್ರಕ್ಕಾಗಿಯೇ ಹೊರತು ಹಿಂದೂ ರಾಷ್ಟ್ರಕ್ಕಾಗಿ ಅಲ್ಲ. ಪಾಕಿಸ್ಥಾನವು ಧರ್ಮಾಧಾರಿತ ರಾಷ್ಟ್ರ ವಾಯಿತು. ಅದರ ಪರಿಸ್ಥಿತಿ ಏನಾಗಿದೆ ಎಂಬುದು ನಿಮ್ಮ ಮುಂದಿದೆ. ಜಗತ್ತಿನಲ್ಲಿ ನಾವು ಪ್ರಬಲ ಪ್ರಜಾಪ್ರಭುತ್ವಕ್ಕೆ ಉದಾಹರಣೆಯಾಗಿದ್ದೇವೆ. ಕೆಲವು ಜಗಳಗಳನ್ನು ಹೊರತುಪಡಿಸಿ ಜನರು ಸಂತೋಷದ ವಾತಾವರಣದಲ್ಲಿ 75 ವರ್ಷಗಳನ್ನು ಕಳೆದಿದ್ದಾರೆ. ನಾವು ಭಾರತದಂಥ ವೈವಿಧ್ಯಮಯ ದೇಶವನ್ನು ಒಂದಾಗಿಟ್ಟು ಕೊಳ್ಳಬಹುದು. ಪೂರ್ವದಲ್ಲಿ ಚೀನಿ ರೀತಿ ಕಾಣುವ ಜನರಿದ್ದರೆ, ಪಶ್ಚಿಮದಲ್ಲಿ ಅರಬ್‌ ರೀತಿ, ಉತ್ತರದಲ್ಲಿ ಬಹುತೇಕರು ಬಿಳಿಯರ ರೀತಿ ಮತ್ತು ದಕ್ಷಿಣದಲ್ಲಿ ಆಫ್ರಿಕನ್ನರ ರೀತಿ ಕಾಣುವರಿದ್ದರೂ ವೈವಿಧ್ಯತೆಯಲ್ಲಿ ಏಕತೆ ಕಾಣುವ ಭಾರತಕ್ಕೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ನಾವೆಲ್ಲರೂ ಸಹೋದರ ಮತ್ತು ಸಹೋದರಿಯರು. ನಾವು ಭಿನ್ನ ಭಾಷೆ, ಭಿನ್ನ ಧರ್ಮ, ಭಿನ್ನ ಸಂಪ್ರದಾಯ ಮತ್ತು ಭಿನ್ನ ಆಹಾರವನ್ನು ಗೌರವಿಸುತ್ತೇವೆ’ ಎಂದು ಸ್ಯಾಮ್‌ ಪಿತ್ರೋಡಾ ಹೇಳಿದ್ದರು.

Advertisement

ಪಿತ್ರೋಡಾ ಹೇಳಿಕೆಗೆ ರಾಹುಲ್‌
ಗಾಂಧಿ ಉತ್ತರಿಸಬೇಕು: ಮೋದಿ
ತೆಲಂಗಾಣದ ವಾರಂಗಲ್‌ನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ನನ್ನನ್ನು ಬೈದರೆ ನನಗೆ ಕೋಪ ಬರುವುದಿಲ್ಲ. ಶೆಹಜಾದಾ (ರಾಹುಲ್‌ ಗಾಂಧಿ) ಮಾರ್ಗದರ್ಶಕರು ಮಾಡಿದ ಜನಾಂಗೀಯ ನಿಂದನೆ ನನ್ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮೋದಿ ಹೇಳಿದರು. ತಮ್ಮ ಅಮೆ ರಿ ಕದ ಅಂಕ ಲ್‌ ಪಿತ್ರೋಡಾ ಹೇಳಿಕೆಗೆ ರಾಹುಲ್‌ ಗಾಂಧಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಮೋದಿ ಮಾತ್ರವಲ್ಲದೇ, ಅಸ್ಸಾಮ್‌ ಸಿಎಂ ಹಿಮಂತ್‌ ಬಿಸ್ವಾ ಶರ್ಮ, ಸಚಿವರಾ ದ ಅನುರಾಗ್‌ ಠಾಕೂದ ನಿರ್ಮಲಾ ಸೀತಾ ರಾ ಮನ್‌, ನಟಿ ಕಂಗನಾ ರಣಾವತ್‌, ಬಿಜೆಪಿ ವಕ್ತಾರ ಶೆಹಜಾದ ಪೂನಾವಾಲ ಅವರು ಕಾಂಗ್ರೆಸ್‌ ಟೀಕಿಸಿದ್ದಾರೆ.

ವಿವಾದಿತ ಹೇಳಿಕೆ: ಕಾಂಗ್ರೆಸ್‌ ಅಂತರ ಸ್ಯಾಮ್‌ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಅವರ ಹೋಲಿಕೆಯು ಸಂಪೂರ್ಣ ತಪ್ಪು ಮತ್ತು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಉತ್ತರಿಸಲಿ
ಚರ್ಮದ ಬಣ್ಣದ ಆಧಾರದ ಮೇಲೆ ಅವಮಾನ ಮಾಡುವು ದನ್ನು ದೇಶದ ಜನರು ಸಹಿಸುವುದಿಲ್ಲ. ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣ ಕಪ್ಪಾಗಿರುವುದರಿಂದಲೇ ರಾಷ್ಟ್ರಪತಿ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಕಾಂಗ್ರೆಸ್‌ ಪ್ರಯತ್ನಿಸಿತು ಎಂಬುದು ಈಗ ಅರ್ಥವಾಗುತ್ತಿದೆ
 -ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next