ಪರ್ತ್: ಭಾನುವಾರ ಇಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಎದುರು ದಕ್ಷಿಣ ಆಫ್ರಿಕಾ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.
ಟಾಸ್ ಗೆದ್ದ ಭಾರತ ತಂಡ ಆರಂಭಿಕ ದಕ್ಷಿಣ ಆಫ್ರಿಕಾ ಬಿಗು ದಾಳಿಗೆ ಸಿಲುಕಿ 9 ವಿಕೆಟ್‌ಗೆ 133 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ದಕ್ಷಿಣ ಆಫ್ರಿಕಾದ ವೇಗಿಗಳು ಭಾರತದ ಅಗ್ರ ಕ್ರಮಾಂಕದ ಅಸಮರ್ಪಕತೆಯನ್ನು ಬಹಿರಂಗಪಡಿಸಿದರು. ನಾಯಕ ರೋಹಿತ್ ಶರ್ಮಾ (15ರನ್ ) ಕೆಎಲ್ ರಾಹುಲ್ (14 ಎಸೆತಗಳಲ್ಲಿ 9) ವಿರಾಟ್ ಕೊಹ್ಲಿ 12 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. 49 ರನ್‌ಗಳಿದ್ದಾಗ 5 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ನೆರವಾದ ಸೂರ್ಯಕುಮಾರ್ ಯಾದವ್ ಪ್ರತಿಕೂಲ ಪರಿಸ್ಥಿತಿಯಲ್ಲಿ ತಮ್ಮ ಸಮಯೋಚಿತ ಆಟ ಪ್ರದರ್ಶಿಸಿದರು. ಸೂರ್ಯ ಅವರು ಅರ್ಧಶತಕ ತಂಡದ ಮೊತ್ತ ನೂರರ ಗಡಿ ದಾಟಲು ನೆರವಾಯಿತು. 40 ಎಸೆತಗಳಲ್ಲಿ 68 ರನ್‌ಗಳನ್ನು ಗಳಿಸಿದರು.
ದೀಪಕ್ ಹೂಡಾ ಶೂನ್ಯ, ದಿನೇಶ್ ಕಾರ್ತಿಕ್ 6 ರನ್,ಅಶ್ವಿನ್ 7 ರನ್ ಗಳಿಸಿ ಔಟಾದರು. ಭುವನೇಶ್ವರ್ ಔಟಾಗದೆ 4 ರನ್, ಕೊನೆಯಲ್ಲಿ ಬಂದ ಶಮಿ ರನೌಟಾದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 3 ರನ್ ಆಗುವಷ್ಟರಲ್ಲಿ ಕ್ವಿಂಟನ್ ಡಿ ಕಾಕ್ ಅವರ ಮೊದಲ ವಿಕೆಟ್ ಕಳೆದುಕೊಂಡಿತು.24 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಐಡೆನ್ ಮಾರ್ಕ್ರಾಮ್ (52 ರನ್) ಮತ್ತು ಡೇವಿಡ್ ಮಿಲ್ಲರ್ ಅವರ ಔಟಾಗದೆ 59 ರನ್ ಕೊಡುಗೆಯಿಂದ ಜಯಸಿರಿಯನ್ನು ಒಲಿಸಿ ಕೊಂಡಿತು. 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಜಯಭೇರಿ ಬಾರಿಸಿತು.
ಭಾರತದ ಪರ ಬೌಲಿಂಗ್ ನಲ್ಲಿ ಅರ್ಷದೀಪ್ ಸಿಂಗ್ 2 ಮೊಹಮ್ಮದ್ ಶಮಿ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಬೌಲಿಂಗ್ ನಲ್ಲಿ ಮಿಂಚಿದ ಲುಂಗಿ ಎನ್‌ಗಿಡಿ 4 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರೆನಿಸಿಕೊಂಡರು. ಪಾರ್ನೆಲ್ 1 ಮೇಡನ್ ಓವರ್ ಎಸೆದು 3 ವಿಕೆಟ್ ಪಡೆದರು. (3.80 ಎಕಾನಮಿ)
ನೆದರ್ ಲ್ಯಾಂಡ್ ವಿರುದ್ದ ಪಾಕ್ ಗೆ ಜಯ
ಇನ್ನೊಂದು ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ದ ಕಿಸ್ಥಾನ 6 ವಿಕೆಟ್ ಜಯ ಸಾಧಿಸಿದೆ. ನೆದರ್ ಲ್ಯಾಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 91 ರನ್ ಮಾತ್ರ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ 13.5 ಓವರ್ ಗಳಲ್ಲಿ4 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿ ಸುಲಭ ಜಯ ಗಳಿಸಿತು.