Advertisement

ದಕ್ಷಿಣ ಆಫ್ರಿಕಾ ಪರ ಬವುಮಾ,ಡುಸ್ಸೆನ್ ಶತಕ: ಭಾರತಕ್ಕೆ ಗೆಲ್ಲಲು 297 ಗುರಿ

06:16 PM Jan 19, 2022 | Team Udayavani |

ಪಾರ್ಲ್: ಪ್ರವಾಸಿ ಭಾರತ ತಂಡದ ವಿರುದ್ಧ ಬುಧವಾರ ಇಲ್ಲಿನ ಬೋಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡರ್ ಡುಸ್ಸೆನ್ ಭರ್ಜರಿ ಶತಕಗಳನ್ನು ಸಿಡಿಸಿ 297 ರನ್ ಗಳ  ಗೆಲುವಿನ ಗುರಿಯನ್ನು ರಾಹುಲ್ ಪಡೆಯ ಮುಂದಿಟ್ಟಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ನಾಯಕ ಟೆಂಬಾ ಬವುಮಾ 110(143ಎಸೆತ) ರನ್ ಗಳಿಸಿ ಔಟಾದರು. ರಾಸ್ಸಿ ವ್ಯಾನ್ ಡೆರ್ ಭರ್ಜರಿ ಶತಕ ಸಿಡಿಸಿದರು. 96 ಎಸೆತಗಳಲ್ಲಿ 129 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಬುಮ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next