Advertisement

ಖ್ಯಾತ ಜ್ಯೋತಿಷಿ ಎಸ್‌. ಕೆ. ಜೈನ್‌ ನಿಧನ

12:45 AM Apr 13, 2024 | Team Udayavani |

ಬೆಂಗಳೂರು: ನಾಡಿನ ಖ್ಯಾತ ಜ್ಯೋತಿಷಿ, ದಕ್ಷಿಣ ಕನ್ನಡ ಮೂಲದ ಎಸ್‌. ಕೆ. ಜೈನ್‌ (67) ಅವರು ಎ. 12ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅನಾರೋಗ್ಯ ಕಾರಣದಿಂದಾಗಿ ಅವರು ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಖಾಸಗಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.

ಮೂಲತಃ ದಕ್ಷಿಣ ಕನ್ನಡದವರಾಗಿದ್ದ ಅವರು ಬೆಂಗಳೂರಿನಲ್ಲಿ ಬೆಳೆದು, ಅಲ್ಲೇ ನೆಲೆಸಿದ್ದರು. ಇವರ ತಂದೆ ಬಿ.ಜಿ ಶಶಿಕಾಂತ್‌ ಜೈನ್‌ ಕೂಡ ಹೆಸರಾಂತ ಜ್ಯೋತಿಷಿಯಾಗಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next