Advertisement

ವಾದ್ಯದ ಕಿರಿಕಿರಿ: 2 ಸಲ ಪಂದ್ಯ ನಿಲ್ಲಿಸಿದ ಅಂಪಾಯರ್!

06:10 AM Mar 12, 2018 | Team Udayavani |

ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ ನಡುವೆ ಇಲ್ಲಿನ “ಸೇಂಟ್‌ ಜಾರ್ಜ್‌ ಪಾರ್ಕ್‌’ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಅಂಪಾಯರ್‌ಗಳು ಎರಡು ಸಲ ಪಂದ್ಯ ನಿಲ್ಲಿಸಿ  ಸುದ್ದಿಯಾಗಿದ್ದಾರೆ.

Advertisement

ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಜೋರಾಗಿ ವಾದ್ಯ ಮೊಳಗಿಸಿ ತಂಡಗಳಿಗೆ ಚಿಯರ್‌ ಮಾಡುತ್ತಿದ್ದರು. ಇದು ಪಂದ್ಯದ ಅಂಪಾಯರ್‌ಗಳಾದ ಕುಮಾರ ಧರ್ಮಸೇನ ಹಾಗೂ ಸುಂದರಂ ರವಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ. ಆಗ ವಾದ್ಯ ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಮತ್ತೆ ಅಭಿಮಾನಿಗಳು ಒತ್ತಾಯ ಮಾಡಿದ್ದರಿಂದ ಬ್ಯಾಂಡ್‌ ಅಬ್ಬರ ಶುರುವಾಯಿತು. ಈ ವೇಳೆ ಮ್ಯಾಚ್‌ ರೆಫ್ರಿ ಜೆಫ್ ಕ್ರೋವ್‌ ನಡುವೆ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು  ಯತ್ನಿಸಿದರು. ಆದರೆ ಇದು ಯಾವುದೇ ಪರಿಣಾಮ ಬೀರಲಿಲ್ಲ. ಆಗ ಪಂದ್ಯವನ್ನು ನಿಲ್ಲಿಸುವುದಾಗಿ ಅಭಿಮಾನಿಗಳಿಗೆ ತಿಳಿಸಲಾಯಿತು. 2 ಸಲ ಪಂದ್ಯ ಸ್ಥಗಿತಗೊಂಡ ಬಳಿಕ ಸ್ವಲ್ಪ ಮಟ್ಟಿಗೆ ವಾದ್ಯದ ಸ್ವರ ಕ್ಷೀಣಗೊಂಡಿತು!

Advertisement

Udayavani is now on Telegram. Click here to join our channel and stay updated with the latest news.

Next