Advertisement

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

11:40 PM Dec 07, 2023 | Team Udayavani |

ಡರ್ಬಾನ್‌: ಭಾರತೀಯ ಕ್ರಿಕೆಟ್‌ ತಂಡವು ದಕ್ಷಿಣ ಆಫ್ರಿಕಾ ತಂಡದೆದುರು ನಡೆಯಲಿರುವ ಟಿ20, ಏಕದಿನ ಮತ್ತು ಟೆಸ್ಟ್‌ ಸರಣಿ ಯಲ್ಲಿ ಪಾಲ್ಗೊಳ್ಳಲು ಡರ್ಬಾನ್‌ಗೆ ಆಗಮಿಸಿದೆ. ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಸಂಭ್ರಮ ದಿಂದ ಸ್ವಾಗತಿಸಿದರಲ್ಲದೇ ಸೆಲ್ಫಿ ತೆಗೆದು ಖುಷಿಪಟ್ಟರು.

Advertisement

ಟಿ20 ಸರಣಿಯು ಮುಂದಿನ ರವಿವಾರದಿಂದ ಆರಂಭಗೊಳ್ಳಲಿದ್ದರೆ ಏಕದಿನ ಸರಣಿಯು ಡಿ. 17ರಿಂದ ಆರಂಭಗೊಳ್ಳಲಿದೆ. ವೈಟ್‌ಬಾಲ್‌ ಸರಣಿಗೆ ಹಿರಿಯ ಆಟಗಾರರಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಅವರು ಲಭ್ಯರಿಲ್ಲ. ಆದರೆ ಅವರು ಎರಡು ಪಂದ್ಯಗಳ ಟೆಸ್ಟ್‌ ಸರಣಿ ವೇಳೆ ತಂಡ ವನ್ನು ಸೇರಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್‌ ಸೆಂಚುರಿಯನ್‌ನಲ್ಲಿ ಡಿ. 26ರಿಂದ ಆರಂಭಗೊಳ್ಳಲಿದ್ದರೆ ದ್ವಿತೀಯ ಟೆಸ್ಟ್‌ ಜ. 3ರಿಂದ ಕೇಪ್‌ಟೌನ್‌ ನಲ್ಲಿ ನಡೆಯಲಿದೆ.

ಟಿ20 ತಂಡವನ್ನು ಸೂರ್ಯಕುಮಾರ್‌ ಯಾದವ್‌ ಮುನ್ನಡೆಸಲಿದ್ದರೆ ಏಕದಿನ ಸರಣಿಯ ನಾಯಕತ್ವವನ್ನು ಕೆಎಲ್‌ ರಾಹುಲ್‌ ವಹಿಸಲಿದ್ದಾರೆ. ಏಕದಿನ ತಂಡದಲ್ಲಿ ಯುವ ಆಟಗಾರರಾದ ರಿಂಕು ಸಿಂಗ್‌, ತಿಲಕ್‌ ವರ್ಮ, ಸಾಯಿ ಸುದರ್ಶನ್‌ ಮತ್ತು ರಜತ್‌ ಪಟಿದಾರ್‌ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next