ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಮೊದಲು ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಿದೆ. ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಬೌಲರ್ ಮೊಹಮ್ಮದ್ ಶಮಿ ಅವರು ಇದೀಗ ತಂಡದಿಂದ ಹೊರಬಿದ್ದಿದ್ದಾರೆ.
ಏಕದಿನ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೀಮರ್ ಪಾದದ ಗಾಯದಿಂದ ಬಳಲುತ್ತಿದ್ದಾರೆ.
ಶಮಿ ಅನುಪಸ್ಥಿತಿಯು ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡಕ್ಕೆ ಹೊಡೆತ ಬಿದ್ದಿದೆ. ಅವರು ಕೇವಲ 64 ಟೆಸ್ಟ್‌ಗಳಿಂದ 27.71 ರ ಉತ್ತಮ ಸರಾಸರಿಯಲ್ಲಿ 229 ವಿಕೆಟ್‌ಗಳನ್ನು ಪಡೆದಿದ್ದಾರೆ. 2021-22 ರಲ್ಲಿ ಅವರ ಹಿಂದಿನ ಪ್ರವಾಸದಲ್ಲಿ ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು, ಮೂರು ಟೆಸ್ಟ್‌ಗಳಿಂದ 21 ರ ಸರಾಸರಿಯಲ್ಲಿ 14 ವಿಕೆಟ್ ಗಳನ್ನು ಪಡೆದಿದ್ದರು. ಶಮಿಗೆ ಬದಲಿ ಆಟಗಾರನನ್ನು ಭಾರತ ಹೆಸರಿಸಿಲ್ಲ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ತಂಡದಲ್ಲಿದ್ದಾರೆ.
ಚಾಹರ್ ಅಲಭ್ಯತೆ: ಇದೇ ವೇಳೆ ಏಕದಿನ ಸರಣಿಗೆ ವೇಗಿ ದೀಪಕ್ ಚಾಹರ್ ಅಲಭ್ಯರಾಗಲಿದ್ದಾರೆ. ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ದೀಪಕ್ ಚಾಹರ್ ಅವರು ತಂಡದಿಂದ ಹಿಂದೆ ನಡೆದಿದ್ದಾರೆ. ಅವರ ಬದಲಿಗೆ ಬಂಗಾಳದ ಸೀಮರ್ ಆಕಾಶ್ ದೀಪ್ ಆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕೋಚಿಂಗ್ ಸಿಬ್ಬಂದಿ ಬದಲು: ಇದರ ಮಧ್ಯೆ, ರಾಹುಲ್ ದ್ರಾವಿಡ್ ನೇತೃತ್ವದ ಭಾರತದ ಕೋಚಿಂಗ್ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರು ಏಕದಿನ ಸರಣಿಯ ಭಾಗವಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಈ ಸಮಯದಲ್ಲಿ ಟೆಸ್ಟ್ ಸರಣಿಯ ಸಿದ್ಧತೆಯ ಭಾಗವಾಗಿ ಭಾರತ ಎ ತಂಡ ಅದನ್ನು ಮೇಲ್ವಿಚಾರಣೆ ಮಾಡುತ್ತಾರೆ.
ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಬೌಲಿಂಗ್ ಕೋಚ್ ರಾಜೀಬ್ ದತ್ತಾ ಮತ್ತು ಫೀಲ್ಡಿಂಗ್ ಕೋಚ್ ಅಜಯ್ ರಾತ್ರಾ ಅವರನ್ನೊಳಗೊಂಡ ‘ಎ’ ತಂಡದ ಸಿಬ್ಬಂದಿ ಏಕದಿನ ತಂಡವನ್ನು ಕೋಚ್ ಮಾಡಲಿದ್ದಾರೆ.