Advertisement

ಬಿಸಿಲುನಾಡಲ್ಲಿ’ಸೌತ್‌ ಆಫ್ರಿಕಾ’ಕೋವಿಡ್ ಭೀತಿ

06:23 PM Mar 14, 2021 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಜನ ನಿಟ್ಟುಸಿರು ಬಿಡುತ್ತಿದ್ದ ಬೆನ್ನಲ್ಲೇ ವಿದೇಶದಿಂದ ಬಂದವರಲ್ಲಿ ಎರಡನೇ ಅಲೆಯ ರೂಪಾಂತರಿ ಕೋವಿಡ್ ವೈರಸ್‌ ಪತ್ತೆಯಾಗಿದ್ದು, ಮತ್ತೆ ಆತಂಕ ಸೃಷ್ಟಿಸಿದೆ.

Advertisement

2020 ರಲ್ಲಿ ಜಗತ್ತನ್ನೇ ಕಾಡಿದ ಕೋವಿಡ್ ಏಪ್ರಿಲ್‌ 3 ರಂದು ಮೊದಲ ಪ್ರಕರಣ ಪತ್ತೆಯಾಗುವ ಮೂಲಕ ಬಳ್ಳಾರಿ ಜಿಲ್ಲೆಗೆ ಕಾಲಿಟ್ಟಿತ್ತು. ಹೊಸಪೇಟೆಯ ಒಂದೇ ಕುಟುಂಬದ ಮೂವರಲ್ಲಿ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಜನರನ್ನು ಭಯಭೀತರನ್ನಾಗಿ ಮಾಡಿತ್ತು. ಇದರ ಬೆನ್ನಲ್ಲೇ ಏಪ್ರಿಲ್‌ 5ರಂದು ಬಳ್ಳಾರಿ ನಗರದಲ್ಲಿ ಒಬ್ಬರಲ್ಲಿ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿತು. ಮೇ ತಿಂಗಳ ಕೊನೆಯವರೆಗೂ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಇದ್ದ ಸೋಂಕಿತರ ಸಂಖ್ಯೆ ಜೂನ್‌ ತಿಂಗಳ ಆರಂಭದಲ್ಲಿ ಜಿಂದಾಲ್‌ ಸಂಸ್ಥೆಯ ನೌಕರರಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಫೋಟಗೊಂಡಿತು. ನಂತರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇತ್ತು.

ಕೆಲವೊಂದು ದಿನ 700-800 ಜನರಲ್ಲೂ ಕೋವಿಡ್ ಪತ್ತೆಯಾಗಿತ್ತು. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು. ಸದ್ಯ ಜಿಲ್ಲೆಯಲ್ಲಿ ಸೋಂಕು ಇಳಿಮುಖವಾಗಿದ್ದು ಶುಕ್ರವಾರ 17 ಜನರಲ್ಲಿ ಸೋಂಕು ದೃಢವಾಗಿದೆ. 103 ಸಕ್ರಿಯ ಪ್ರಕರಣಗಳು ಇವೆ. ಸೋಂಕಿನಿಂದ ಗುಣಮುಖರಾದ 7 ಜನರನ್ನು ಬಿಡುಗಡೆಗೊಳಿಸಲಾ್ಗಿದೆ. ಈವರೆಗೆ ಒಟ್ಟು 39,386 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಗುಣಮುಖರಾದ 38,686 ಜನರನ್ನು ಬಿಡುಗಡೆಗೊಳಿಸಲಾಗಿದೆ. ಈ ವರೆಗೆ 597 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ವರೆಗೆ 2,12,233 ರ್ಯಾಪಿಡ್‌ ಆ್ಯಂಟಿಜೆನ್‌, 3,42,364 ಜನರಿಗೆ ಆರ್‌ಟಿಪಿಸಿಆರ್‌ ಸೇರಿ ಒಟ್ಟು 5,54,597 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಜಿಲ್ಲೆಯಲ್ಲಿ ಪ್ರತಿದಿನ ನೂರರ ಗಡಿದಾಟುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಕೇವಲ ಒಂದಂಕಿ, ಎರಡಂಕಿಗೆ ಇಳಿದಿದೆ. ಕೊನೆಗೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಜನ ನಿಟ್ಟುಸಿರು ಬಿಡುತ್ತಿರುವಾಗಲೇ ರೂಪಾಂತರಿ ಕೋವಿಡ್ ಕಾಲಿಟ್ಟಿದ್ದು, ಮತ್ತೆ ಭಯ ಮೂಡಿಸಿದೆ.

ಹೈದ್ರಾಬಾದ್‌, ದುಬೈನಿಂದ ಬಂದವರಲ್ಲಿ ರೂಪಾಂತರಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದು ಉಲ್ಬಣವಾಗುತ್ತ ಹೋದಲ್ಲಿ ಮತ್ತೂಮ್ಮೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾಗಬಹುದು ಎಂಬ ಆತಂಕ ಜನರಲ್ಲಿ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next