Advertisement

ವನಿತಾ ಟಿ20 ವಿಶ್ವಕಪ್‌: ಸೆಮಿಫೈನಲ್‌ಗೆ ನೆಗೆದ ದಕ್ಷಿಣ ಆಫ್ರಿಕಾ

11:07 PM Feb 22, 2023 | Team Udayavani |

ಕೇಪ್‌ ಟೌನ್‌: “ಎ’ ವಿಭಾಗದ ಅಂತಿಮ ಹಾಗೂ ನಿರ್ಣಾಯಕ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಬಗ್ಗುಬಡಿಯುವ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.

Advertisement

ಈ ಜಯದೊಂದಿಗೆ ಒಟ್ಟು 4 ಅಂಕ ಸಂಪಾದಿಸಿದ ದಕ್ಷಿಣ ಆಫ್ರಿಕಾ “ಎ’ ವಿಭಾಗದ ದ್ವಿತೀಯ ಸ್ಥಾನ ಅಲಂಕ ರಿಸಿತು. ಈ ಪಂದ್ಯಕ್ಕೂ ಮುನ್ನ ನ್ಯೂಜಿಲ್ಯಾಂಡ್‌ ದ್ವಿತೀಯ ಸ್ಥಾನದಲ್ಲಿತ್ತು. ಅದು ಕೂಡ 4 ಅಂಕ ಗಳಿಸಿತ್ತು. ಆದರೆ ರನ್‌ರೇಟ್‌ನಲ್ಲಿ ಹಿಂದುಳಿದ ಕಾರಣ ಕೂಟದಿಂದ ಹೊರಬಿತ್ತು.

ಅಂತಿಮ ಲೀಗ್‌ ಪಂದ್ಯಕ್ಕೂ ಮೊದಲೇ ದಕ್ಷಿಣ ಆಫ್ರಿಕಾ ರನ್‌ರೇಟ್‌ನಲ್ಲಿ ನ್ಯೂಜಿಲ್ಯಾಂಡ್‌ಗಿಂತ ಮುಂದಿತ್ತು.

ಅಕಸ್ಮಾತ್‌ ಬಾಂಗ್ಲಾ ವಿರುದ್ಧ ಸೋತರಷ್ಟೇ ಹರಿಣಗಳ ಆಟ ಕೊನೆಗೊಳ್ಳುತ್ತಿತ್ತು. ಶ್ರೀಲಂಕಾ ಕೂಡ 4 ಅಂಕ ಹೊಂದಿತ್ತಾದರೂ ರನ್‌ರೇಟ್‌ನಲ್ಲಿ “ಮೈನಸ್‌’ ಇದ್ದ ಕಾರಣ ಮೊದಲೇ ಹೊರಬಿದ್ದಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 6 ವಿಕೆಟಿಗೆ ಕೇವಲ 113 ರನ್‌ ಗಳಿಸಿತು. ದಕ್ಷಿಣ ಆಫ್ರಿಕಾ 17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 117 ರನ್‌ ಬಾರಿಸಿತು. ಲಾರಾ ವೋಲ್ವಾರ್ಟ್‌ ಅಜೇಯ 66 ರನ್‌, ಟಾಜ್ಮಿನ್‌ ಬ್ರಿಟ್ಸ್‌ ಅಜೇಯ 50 ರನ್‌ ಹೊಡೆದರು.

Advertisement

ಬಾಂಗ್ಲಾ ಸರದಿಯಲ್ಲಿ ನಾಯಕಿ ನಿಗಾರ್‌ ಸುಲ್ತಾನಾ ಸರ್ವಾಧಿಕ 30 ರನ್‌ ಮಾಡಿದರು. ಬಾಂಗ್ಲಾದೇಶ-6 ವಿಕೆಟಿಗೆ 113 (ನಿಗಾರ್‌ ಸುಲ್ತಾನಾ 30, ಶೋಭನಾ ಮೋಸ್ತರಿ 27, ನಹಿದಾ ಅಖ್ತರ್‌ ಅಜೇಯ 15, ಮರಿಜಾನ್‌ ಕಾಪ್‌ 15ಕ್ಕೆ 2, ಅಯಬೊಂಗಾ ಖಾಕಾ 21ಕ್ಕೆ 2). ದಕ್ಷಿಣ ಆಫ್ರಿಕಾ-17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 117 (ಲಾರಾ ವೋಲ್ವಾರ್ಟ್‌ ಅಜೇಯ 66 ರನ್‌, ಟಾಜ್ಮಿನ್‌ ಬ್ರಿಟ್ಸ್‌ ಅಜೇಯ 50).

 

Advertisement

Udayavani is now on Telegram. Click here to join our channel and stay updated with the latest news.

Next