Advertisement

ದಕ್ಷಿಣ ಆಫ್ರಿಕಾಕ್ಕೆ ಇನ್ನಿಂಗ್ಸ್‌ ಗೆಲುವು

07:00 AM Oct 09, 2017 | |

ಬ್ಲೋಮ್‌ಫಾಂಟೀನ್‌: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾವು ಇನ್ನಿಂಗ್ಸ್‌ ಮತ್ತು 254 ರನ್ನುಗಳಿಂದ ಜಯಭೇರಿ ಬಾರಿಸಿದೆ.

Advertisement

ನಾಲ್ವರು ಆಟಗಾರರ ಶತಕ ಸಂಭ್ರಮದಿಂದ ದಕ್ಷಿಣ ಆಫ್ರಿಕಾ 4 ವಿಕೆಟಿಗೆ 573 ರನ್ನುಗಳ ಬೃಹತ್‌ ಮೊತ್ತ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದ್ದರೆ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಕಾಗಿಸೊ ರಬಾಡ ದಾಳಿಗೆ ತತ್ತರಿಸಿ ಕೇವಲ 147 ರನ್ನಿಗೆ ಆಲೌಟಾಯಿತು. 426 ರನ್ನುಗಳ ಮೊದಲ ಇನ್ನಿಂಗ್ಸ್‌ ಹಿನ್ನಡೆಯೊಂದಿಗೆ ಮತ್ತೆ ಆಡಲು ಇಳಿದ ಬಾಂಗ್ಲಾದೇಶ ಮತ್ತೆ ರಬಾಡ ದಾಳಿಯನ್ನು ಎದುರಿಸಲಾಗದೆ 172 ರನ್ನಿಗೆ ಸರ್ವಪತನ ಕಂಡಿತು. ಇದರಿಂದ ಪಂದ್ಯ ಮೂರೇ ದಿನಗಳಲ್ಲಿ ಮುಗಿಯುವಂತಾಯಿತು. ರಬಾಡ ಒಟ್ಟಾರೆ ಪಂದ್ಯದಲ್ಲಿ 63 ರನ್ನಿಗೆ 10 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸಿÌàಪ್‌ ಸಾಧನೆಗೈದಿತು.

ನಾಲ್ವರ ಶತಕ ಸಂಭ್ರಮ
ಅಗ್ರ ಕ್ರಮಾಂಕದ ನಾಲ್ವರ ಶತಕ ಸಾಹಸದಿಂದ ದಕ್ಷಿಣ ಆಫ್ರಿಕಾ ಭಾರೀ ಮೊತ್ತ ಪೇರಿಸಿತ್ತು ಪಂದ್ಯದ ದ್ವಿತೀಯ ದಿನವಾದ ಶನಿವಾರ 4 ವಿಕೆಟಿಗೆ 573 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು ಎಡಗೈ ಆರಂಭಕಾರ ಡೀನ್‌ ಎಲ್ಗರ್‌ 113 ರನ್‌ (152 ಎಸೆತ, 17 ಬೌಂಡರಿ) ಹೊಡೆದರೆ, ಅವರ ಜತೆಗಾರ ಐಡನ್‌ ಮಾರ್ಕ್‌ರಮ್‌ ಸರ್ವಾಧಿಕ 143 ರನ್‌ ಬಾರಿಸಿದರು (186 ಎಸೆತ, 22 ಬೌಂಡರಿ). ಎಲ್ಗರ್‌ ಪಾಲಿಗೆ ಇದು ಸತತ 2ನೇ ಹಾಗೂ ಒಟ್ಟಾರೆಯಾಗಿ 10ನೇ ಶತಕ. ಮೊದಲ ಟೆಸ್ಟ್‌ನಲ್ಲಿ ಅವರು 199 ರನ್‌ ಮಾಡಿದ್ದರು. ದ್ವಿತೀಯ ಟೆಸ್ಟ್‌ ಆಡುತ್ತಿರುವ ಮಾರ್ಕ್‌ರಮ್‌ಗೆ ಇದು ಮೊದಲ ಶತಕ ಸಂಭ್ರಮ. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 243 ರನ್‌ ಒಟ್ಟುಗೂಡಿತು. ದಕ್ಷಿಣ ಆಫ್ರಿಕಾ ಸರದಿಯ ಉಳಿದಿಬ್ಬರು ಶತಕವೀರರೆಂದರೆ ಹಾಶಿಮ್‌ ಆಮ್ಲ ಮತ್ತು ನಾಯಕ ಫಾ ಡು ಪ್ಲೆಸಿಸ್‌. ಇವರಲ್ಲಿ ಆಮ್ಲ ಗಳಿಕೆ 132 ರನ್‌ (1563 ಎಸೆತ, 17 ಬೌಂಡರಿ). ಇದು ಆಮ್ಲ ಅವರ 28ನೇ ಸೆಂಚುರಿ. ಇದರೊಂದಿಗೆ ದಕ್ಷಿಣ ಆಫ್ರಿಕಾ ಶತಕ ಸಾಧಕರ ಯಾದಿಯಲ್ಲಿ ಆಮ್ಲ ದ್ವಿತೀಯ ಸ್ಥಾನ ಅಲಂಕರಿಸಿದರು. 27 ಶತಕ ಹೊಡೆದ ಗ್ರೇಮ್‌ ಸ್ಮಿತ್‌ ದಾಖಲೆಯನ್ನು ಹಿಂದಿಕ್ಕಿದರು. ಆಫ್ರಿಕಾದ ಗರಿಷ್ಠ ಶತಕ ದಾಖಲೆ ಜಾಕ್‌ ಕ್ಯಾಲಿಸ್‌ ಹೆಸರಲ್ಲಿದೆ (45). 7ನೇ ಶತಕ ದಾಖಲಿಸಿದ ಡು ಪ್ಲೆಸಿಸ್‌ ಗಳಿಕೆ ಅಜೇಯ 135 ರನ್‌ (181 ಎಸೆತ, 15 ಬೌಂಡರಿ). ಆಮ್ಲ-ಡು ಪ್ಲೆಸಿಸ್‌ ಜತೆಯಾಟದಲ್ಲಿ 4ನೇ ವಿಕೆಟಿಗೆ 247 ರನ್‌ ಸಂಗ್ರಹಗೊಂಡಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 4 ವಿಕೆಟಿಗೆ 573; ಬಾಂಗ್ಲಾದೇಶ 147 ಮತ್ತು 172 (ಇಮ್ರುಲ್‌ ಕಯೀಸ್‌ 32, ಮುಶ್ಫಿàಕರ್‌ ರಹೀಂ 26, ಮಹಮುದುಲ್ಲ 43, ಕಾಗಿಸೊ ರಬಾಡ 30ಕ್ಕೆ 5, ಫೆಹ್ಲುಕ್ವಾಯೊ 36ಕ್ಕೆ 3). ಪಂದ್ಯಶ್ರೇಷ್ಠ: ಕಾಗಿಸೊ ರಬಾಡ

Advertisement

Udayavani is now on Telegram. Click here to join our channel and stay updated with the latest news.

Next