Advertisement

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

08:53 PM Jan 26, 2022 | Team Udayavani |

ಜೊಹಾನ್ಸ್‌ಬರ್ಗ್‌: 32 ವರ್ಷದ ಆಫ್ ಸ್ಪಿನ್ನರ್ ಸೈಮನ್‌ ಹಾರ್ಮರ್‌ ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ ಆರಿಸಲಾದ ತಂಡದಲ್ಲಿ ಹಾರ್ಮರ್‌ ಕಾಣಿಸಿಕೊಂಡಿದ್ದಾರೆ.

Advertisement

2015ರ ಪ್ರವಾಸಿ ಭಾರತ ಸರಣಿಯ ವೇಳೆ ಹಾರ್ಮರ್‌ ಟೆಸ್ಟ್‌ ತಂಡದಲ್ಲಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಸುಮಾರು ಆರೂವರೆ ವರ್ಷಗಳ ಬಳಿಕ ಅವರ ಪುನರಾಗಮನವಾಗಿದೆ.

ಜಾರ್ಜ್‌ ಲಿಂಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದರಿಂದ ಅವರ ಸ್ಥಾನಕ್ಕೆ ಹಾರ್ಮರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಟೆಸ್ಟ್‌ ಸರಣಿ ಫೆ. 17ರಂದು ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾ ತಂಡ : ಡೀನ್‌ ಎಲ್ಗರ್‌ (ನಾಯಕ), ಟೆಂಬ ಬವುಮ, ಸರೆಲ್‌ ಇರ್ವಿ, ಸೈಮನ್‌ ಹಾರ್ಮರ್‌, ಮಾರ್ಕೊ ಜಾನ್ಸೆನ್‌, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ವಿಯಾನ್‌ ಮುಲ್ಡರ್‌, ಲುಂಗಿ ಎನ್‌ಗಿಡಿ, ಡ್ನೂನ್‌ ಒಲಿವರ್‌, ಕೀಗನ್‌ ಪೀಟರ್ಸನ್‌, ಕಾಗಿಸೊ ರಬಾಡ, ರಿಯಾನ್‌ ರಿಕಲ್ಟನ್‌, ಲುಥೊ ಸಿಪಾಮ್ಲ, ಗ್ಲೆಂಟನ್‌ ಸ್ಟರ್‌ಮ್ಯಾನ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಕೈಲ್‌ ವೆರೇನ್‌.

ಇದನ್ನೂ ಓದಿ : ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

Advertisement
Advertisement

Udayavani is now on Telegram. Click here to join our channel and stay updated with the latest news.

Next