ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸದ್ಯ ಕಳಪೆ ಫಾರ್ಮ್ ನಲ್ಲಿದ್ದಾರೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯದಾಗಿ ಶತಕ ಸಿಡಿಸಿದ್ದ ವಿರಾಟ್ ಬಳಿಕ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸರಣಿಯಲ್ಲೂ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಪರಿಣಾಮಕಾರಿ ಆಟ ಬಂದಿಲ್ಲ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗಳಿಸಿದ ರನ್ ಗಳನ್ನು ನೋಡಿ. ಅದು ಸಾಮರ್ಥ್ಯ ಮತ್ತು ಗುಣಮಟ್ಟವಿಲ್ಲದೆ ಅಷ್ಟೊಂದು ರನ್ ಗಳಿಸಲು ಸಾಧ್ಯವಿಲ್ಲ. ಹೌದು, ಇದೀಗ ಅವರು ಕಠಿಣ ಸಮಯದಲ್ಲಿದ್ದಾರೆ. ಅದು ಅವರಿಗೂ ತಿಳಿದಿದೆ. ಅವರು ಸ್ವತಃ ಶ್ರೇಷ್ಠ ಆಟಗಾರರಾಗಿದ್ದಾರೆ. ತಾನೇ ನೆಟ್ಟ ಮಾನದಂಡಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದೂ ವಿರಾಟ್ ಗೆ ತಿಳಿದಿದೆ. ಮತ್ತೆ ಯಶಸ್ವಿಯಾಗಲು ವಿರಾಟ್ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಎಎನ್ ಐ ಗೆ ಹೇಳಿದ್ದಾರೆ.
ಇದನ್ನೂ ಓದಿ:ಮಸ್ಕ್ ಎಲ್ಲದಕ್ಕೂ ನನ್ನಲ್ಲಿ ಭಿಕ್ಷೆ ಬೇಡುತ್ತಿದ್ದ! ಟ್ರಂಪ್-ಮಸ್ಕ್ ಟ್ವಿಟರ್ ವಾರ್
ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಗೆ ಮಾಜಿ ಆಟಗಾರರು ಟೀಕೆ ಮಾಡುತ್ತಿದ್ದಾರೆ. ಕಪಿಲ್ ದೇವ್, ವೆಂಕಟೇಶ್ ಪ್ರಸಾದ್ ರಂತವರು ವಿರಾಟ್ ರನ್ನು ಟಿ20 ತಂಡದಿಂದ ಕೈಬಿಡಬೇಕು ಎಂದಿದ್ದಾರೆ.