Advertisement

ತೆರೆ ಮೇಲೆ ‘ದಾದಾ’ ದಿನಗಳು : ಸಿದ್ಧವಾಗಲಿದೆ ಗಂಗೂಲಿ ಬಯೋಪಿಕ್

04:06 PM Sep 09, 2021 | Team Udayavani |

ಮುಂಬೈ : ಬಾಲಿವುಡ್‍ನಲ್ಲಿ ಬಯೋಪಿಕ್‍ಗಳಿಗೆ ಬರವಿಲ್ಲ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಲ್ಲಿ ಬಯೋಪಿಕ್ ಸಿನಿಮಾಗಳು ಸಾಲು ಸಾಲಾಗಿ ಸಿದ್ದವಾಗುತ್ತಿವೆ. ಅವುಗಳಲ್ಲಿ ರಾಜಕಾರಣಿಗಳು ಹಾಗೂ ಕ್ರಿಕೆಟ್ ತಾರೆಯರ ನೀಜ ಜೀವನದ ಕಹಾನಿ ಬೆಳ್ಳಿ ಪರದೆ ಮೇಲೆ ತೋರಿಸುವ ಪ್ರಯೋಗ ನಡೆದೇ ಇದೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದೆ.

Advertisement

ಹೌದು, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಿತ್ರದ ಕುರಿತು ಬಿಗ್ ಅಪ್​ಡೇಟ್ ಹೊರಬಿದ್ದಿದೆ. ಬಾಲಿವುಡ್​ನ ಜನಪ್ರಿಯ ಪ್ರೊಡಕ್ಷನ್ ಹೌಸ್ ಲವ್ ಫಿಲಂಸ್ ಗಂಗೂಲಿ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದೆ. ಈ ಹಿಂದೆ ಮಲಾಂಗ್, ದೇ ದೇ ಪ್ಯಾರ್ ದೇ ಸೇರಿದಂತೆ ಐದಾರು ಸಿನಿಮಾಗಳನ್ನು ನಿರ್ಮಿಸಿರುವ ಲವ್ ಫಿಲಂಸ್, ಈ ಬಾರಿ ಬಯೋಪಿಕ್ ಕೈಗೊತ್ತಿಕೊಂಡಿರುವುದು ವಿಶೇಷ.

ಈ ಬಗ್ಗೆ ಟ್ವೀಟ್ ಮಾಡಿರುವ ಲವ್ ಫಿಲಂಸ್, ದಾದಾ ಸೌರವ್ ಗಂಗೂಲಿ ಅವರ ಬಯೋಪಿಕ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದೇವೆ ಎಂದು ತಿಳಿಸಲು ಥ್ರಿಲ್ ಆಗಿದ್ದೇವೆ. ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕೆ ನಮಗೆ ಗೌರವವಿದೆ. ಉತ್ತಮ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ..

ತಮ್ಮ ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ  ‘ಎಂಎಸ್ ಧೋನಿ-ಅನ್​ಟೋಲ್ಡ್ ಸ್ಟೋರಿ ‘ ಬಿಡುಗಡೆಯಾಗಿತ್ತು. ಮೊಹಮ್ಮದ್ ಅಜರುದ್ದೀನ್ ಅವರ ಫಿಕ್ಸಿಂಗ್ ಕಹಾನಿ ತಿಳಿಸುವ ‘ಅಜರ್’ಕೂಡ ತೆರೆ ಕಂಡಿತು. ಕ್ರಿಕೆಟ್ ದೇವರು ಸಚಿನ್ ತೆಂಡೋಲ್ಕರ್ ಅವರ ಬಯೋಪಿಕ್ ಕೂಡ ಬಿಡುಗಡೆಯಾಗಿದೆ. ಸದ್ಯ ನಿರ್ದೇಶಕ ಕಬೀರ್ ಖಾನ್ ಕೈಗೆತ್ತಿಕೊಂಡ ’83’ ಸಿನಿಮಾ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ. ಈ ಚಿತ್ರವು 1983ರ ವಿಶ್ವಕಪ್ ಗೆಲುವು ಹಾಗೂ ಕಪಿಲ್ ದೇವ್ ಅವರ ತೆರೆ ಹಿಂದಿನ ಚರಿತ್ರೆಯನ್ನು ತಿಳಿಸಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next