ಈಗಾಗಲೇ ಚಿತ್ರೀಕರಣ ಮುಗಿಸಿರುವ “ಕಟಕ’ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಅಂದಹಾಗೆ, ರವಿ ಬಸ್ರೂರು “ಕಟಕ’ ಮೂಲಕ ಒಂದು ಹಾರರ್ ಸ್ಟೋರಿ ಹೇಳಲು ಹೊರಟಿದ್ದಾರೆ. ಈ ಚಿತ್ರವನ್ನು ಎನ್.ಎಸ್.ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ “ಜಟ್ಟ’, “ಮೈತ್ರಿ’ ಸಿನಿಮಾಗಳನ್ನು ನಿರ್ಮಿಸಿರುವ ಎನ್.ಎಸ್.ರಾಜ್‌ಕುಮಾರ್ ಅವರು ಈಗ “ಕಟಕ’ ಚಿತ್ರ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದ ಮತ್ತೂಂದು ಹೈಲೈಟ್ ಅಂದರೆ ಸೌಂಡ್. ಚಿತ್ರದಲ್ಲಿ ಸೌಂಡಿಂಗ್ ತುಂಬಾ ವಿಭಿನ್ನವಾಗಿರಬೇಕು, ಕಥೆಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಹಾಲಿವುಡ್ ಚಿತ್ರಗಳ ಸೌಂಡಿಂಗ್‌ನಲ್ಲಿ ಕೆಲಸ ಮಾಡುವ ಸುಮಾರು 14 ಕಂಪೆನಿಗಳು ಈ ಚಿತ್ರಕ್ಕೆ ಸೌಂಡ್ ಎಫೆಕ್ಟ್ ನೀಡಿವೆ.
ಅಂದಹಾಗೆ, “ಕಟಕ’ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿದ್ದು, ಈ ಟೈಟಲ್ ಟ್ರ್ಯಾಕ್‌ನ ವಿಶೇಷವೆಂದರೆ, ಆರು ಮಂದಿ ಸಂಗೀತ ನಿರ್ದೇಶಕರು ಈ ಟೈಟಲ್ ಟ್ರ್ಯಾಕ್‌ಗೆ ಧ್ವನಿಯಾಗಿದ್ದಾರೆ. ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಚಂದನ್ ಶೆಟ್ಟಿ, ಭರತ್ ಬಿ.ಜೆ, ಶ್ರೀಧರ್ ಸಂಭ್ರಮ್, ವೀರ್ ಸಮರ್ಥ್, ಚರಣ್ ರಾಜ್ ಧ್ವನಿ ಕೊಟ್ಟಿದ್ದಾರೆ. “ಕಣ್ಣಾರೆ ಕಾಣೋ ಲೋಕ…’ ಎಂದು ಆರಂಭವಾಗುವ ಈ ಟೈಟಲ್ ಟ್ರ್ಯಾಕ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ “ಗುಡ್ಡದ ಭೂತ’ ಧಾರಾವಾಹಿಯನ್ನು ಚಿತ್ರೀಕರಿಸಿದ ಮನೆಯಲ್ಲೇ “ಕಟಕ’ ಚಿತ್ರೀಕರಣ ಕೂಡಾ ಮಾಡಿರೋದು ವಿಶೇಷ. ಚಿತ್ರದಲ್ಲಿ ಒಂದು ಸಿನಿಮಾದಲ್ಲಿ ಬಹುತೇಕ ಹೊಸಬರೇ ನಟಿಸಿದ್ದಾರೆ. ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಛಾಯಾಗ್ರಹಣವಿದೆ. ಇಡೀ ಸಿನಿಮಾ ಕರಾವಳಿಯಲ್ಲಿ ಚಿತ್ರೀಕರಣವಾಗಿದೆ.