Advertisement

ವಿದ್ಯಾರ್ಥಿ ಜೀವನದಲ್ಲೇ ಜನರಿಗೆ ಭೂಮಿ ಹಕ್ಕನ್ನು ಒದಗಿಸಿಕೊಟ್ಟ ಪ್ರಬುದ್ಧ ರಾಜಕಾರಣಿ ಸೊರಕೆ

02:40 PM May 02, 2023 | Team Udayavani |

ಪಡುಬಿದ್ರಿ : ಕರಾವಳಿಯಲ್ಲಿ ವಿದ್ಯಾರ್ಥಿ ಜೀವನದಲ್ಲೇ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಒದಗಿಸಿಕೊಟ್ಟ ಏಕೈಕ ರಾಜಕಾರಣಿ ಇದ್ದರೆ ಅದು ವಿನಯ್‌ ಕುಮಾರ್‌ ಸೊರಕೆ ಅವರು ಮಾತ್ರ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ ಸೋಜ ಹೇಳಿದ್ದಾರೆ.

Advertisement

ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಅವರ ಪರವಾಗಿ ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ ರಹಿತವಾಗಿ, ಶುಭ್ರ ರಾಜಕೀಯ ಜೀವನ ನಡೆಸುತ್ತಿರುವ ವಿನಯತೆಯ ಪ್ರತಿರೂಪವಾಗಿರುವ ವಿನಯ್‌ ಕುಮಾರ್‌ ಸೊರಕೆಯವರು ಕಾಪು ಕ್ಷೇತ್ರದ ಜನತೆಗೆ ಅನಿವಾರ್ಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ, ಐದು ವರ್ಷಗಳ ಸಮಾಜದ ಜತೆಗಿದ್ದು ಸಮಾಜ ಸೇವೆಯ ಜತೆಗೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದು ವಿನಯ ಕುಮಾರ್‌ ಸೊರಕೆ ಮಾತ್ರ. ಈ ಬಾರಿ ಮತದಾನ ಮಾಡುವ ಸಂದರ್ಭ ಮತದಾರರು ಯಾವುದೇ ಅಂಜಿಕೆ, ಅಳುಕಿಲ್ಲದೇ ಸೊರಕೆಯವರಿಗೆ ಮತ ನೀಡುವ ಮೂಲಕ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ಸೋತರೂ ಕ್ಷೇತ್ರದ ಜನರಿಗಾಗಿ ಸೇವೆಗೈದ ಸೊರಕೆಯವರನ್ನು ಗೆಲ್ಲಿಸೋಣ :

ಸುಧೀರ್‌ ಕುಮಾರ್‌ ಮರೋಳಿ ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮರೋಳಿ ಮಾತನಾಡಿ, ಧರಿಸುವ ಬಟ್ಟೆಯಷ್ಟೇ ಶುಭ್ರವಾದ‌ ವ್ಯಕ್ತಿತ್ವವನ್ನು ಹೊಂದಿರುವ ಹಾಗೂ ಜನರ ವಿಶ್ವಾಸ ಮತ್ತು ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆಯವರನ್ನು ದೂಷಿಸಲು ಬಿಜೆಪಿಯವರಿಗೆ ಯಾವುದೇ ಕಾರಣಗಳು ಸಿಗುತ್ತಿಲ್ಲ. ಕಾಪುವಿನಲ್ಲಿ ಸೊರಕೆ ಶಾಸಕರಾಗಿ, ಸಚಿವರಾಗಿದ್ದಾಗ ನಡೆಸಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ನಿಮ್ಮ ಮುಂದಿದೆ. ಪಕ್ಷದ ಆಂತರಿಕ ಕಾರಣಕ್ಕಾಗಿ ಮಂತ್ರಿ ಸ್ಥಾನ ಕೈ ತಪ್ಪಿದರೂ ಬೇಸರ ವ್ಯಕ್ತಪಡಿಸದೆ ಕಾಪು ತಾಲೂಕು ಆಗಲೇಬೇಕು ಎಂದು ಹೋರಾಟ ನಡೆಸಿ, ತಾಲೂಕು ಘೋಷಣೆ ಮಾಡಿಸಿ, ಅನುದಾನವನ್ನೂ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಸೋತ ನಂತರವೂ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡ ಸೊರಕೆ ಅವರನ್ನು ಕಾಪುವಿನ ಜನ ಈ ಬಾರಿ ಖಂಡಿತವಾಗಿಯೂ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಸೊರಕೆಯವರ ಗೆಲುವಿಗಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಟಿಬದ್ಧರಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

Advertisement

ತಾವೇ ಅಭ್ಯರ್ಥಿಯೆಂಬಂತೆ ಪ್ರಚಾರ ಕಾರ್ಯ ನಡೆಸಿ ಪಕ್ಷವನ್ನು ಗೆಲ್ಲಿಸಿ : ಸೊರಕೆ
ಕಾಪು ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಮಾತನಾಡಿ, ತಿನ್ನುವ ಉಪ್ಪಿಗೂ ಜಿಎಸ್‌ಟಿ ಎಂಬ ಬರೆಯನ್ನು ಹಾಕಿ ಬಡವರನ್ನು ಮತ್ತೆ ಬಡತನಕ್ಕೆ ದೂಡಿದ ಬಿಜೆಪಿ ಸರಕಾರ ಚುನಾವಣಾ ಗಿಮಿಕ್‌ ಎಂಬಂತೆ ಅಭಿವೃದ್ಧಿ ಯ ಮಂತ್ರವನ್ನು ಜಪಿಸಿ ಜನರನ್ನು ಮರಳು ಮಾಡುವ ಕಾರ್ಯಕ್ಕೆ ಕೈಹಾಕಿದೆ. ಕಾರ್ಮಿಕರ ಮೇಲೆ ಜಿಎಸ್‌ಟಿ ತೆರಿಗೆ ಮೂಲಕ ಕಾರ್ಮಿಕರನ್ನು ಬೀದಿಗೆ ತಂದಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರಕ್ಕಾಗಿ ಸಿದ್ಧಪಡಿಸಿದ ನಮ್ಮ ಕನಸಿನ ಕಾಪು ಪ್ರಣಾಳಿಕೆಯಲ್ಲಿ ಕಾರ್ಮಿಕರಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ದೇವೆ. ಪಕ್ಷದ ಗ್ಯಾರಂಟಿ ಘೋಷಣೆಗಳ ಜತೆಗೆ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ, ಮತದಾರರ ಮನವೊಲಿಸುವ ಜವಬ್ದಾರಿ ಕಾರ್ಯಕರ್ತರದ್ದಾಗಿದೆ. ಇನ್ನುಳಿದ 10 ದಿನಗಳಲ್ಲಿ ಪ್ರತಿಯೊಬ್ಬರೂ ತಾವೇ ಅಭ್ಯರ್ಥಿ ಎಂಬ ಭಾವನೆಯೊಂದಿಗೆ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಕೆಪಿಸಿಸಿ ಮುಖಂಡರಾದ ರಾಜಶೇಖರ ಕೋಟ್ಯಾನ್‌, ನವೀನ್‌ಚಂದ್ರ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಪಕ್ಷದ ನಾಯಕರಾದ ದಿನೇಶ್‌ ಕೋಟ್ಯಾನ್‌, ವೈ. ಸುಕುಮಾರ್‌, ಶಿವಾಜಿ ಸುವರ್ಣ, ರಮೀಜ್‌ ಹುಸೇನ್‌, ವಿಶ್ವಾಸ್‌ ಅಮೀನ್‌, ಶೇಖರ ಹೆಜ್ಮಾಡಿ, ಕರುಣಾಕರ ಪೂಜಾರಿ, ಸುಧೀರ್‌ ಕರ್ಕೆàರ, ಯಶವಂತ್‌ ಪಲಿಮಾರು, ಅಖೀಲೇಶ್‌ ಕೋಟ್ಯಾನ್‌, ಶರ್ಪುದ್ದೀನ್‌ ಶೇಖ್‌, ದೀಪಕ್‌ ಕುಮಾರ್‌ ಎರ್ಮಾಳ್‌, ಅಬ್ದುಲ್‌ ಅಜೀಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next