Advertisement

Soraba; ಡ್ಯಾಂ ನೀರಿನ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ: ಸಚಿವ ಮಧು ಬಂಗಾರಪ್ಪ

04:51 PM Jul 13, 2024 | keerthan |

ಶಿವಮೊಗ್ಗ: 354 ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಯೋಜನೆ ಆರಂಭಿಸಲಿದ್ದೇವೆ. ಶರಾವತಿ ನದಿಯಿಂದ ಕುಡಿಯುವ ನೀರಿನ ಯೋಜ‌ನೆ ಮಾಡುತ್ತೇವೆ. ಕಾನೂನು ಬದಲಾವಣೆ ಮಾಡಿ ಜನರಿಗೆ ಸಹಕಾರ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರಿಗೆ ಒಕ್ಕಲೆಬ್ಬಿಸದಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ದಂಡಾವತಿಯಲ್ಲಿ ಎರಡು ಚಾನಲ್ ಮಾಡಿ ನೀರಾವರಿ ಯೋಜನೆ ಮಾಡುತ್ತೇವೆ. ಡ್ಯಾಂ ಮಾಡಿ ಜನರನ್ನು ಮುಳುಗಿಸೋಲ್ಲ. ಜಲಾಶಯಗಳ ನೀರು ಪೋಲಾಗದಂತೆ ಕ್ರಿಯಾ ಯೋಜನೆ ಸಿದ್ದ ಮಾಡಲಾಗುತ್ತಿದೆ. ಡ್ಯಾಂ ನೀರಿನ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಮಳೆಗಾಲದಲ್ಲಿ ಏನಾದರೂ ಹಾನಿಯಾಗಿದೆಯಾ ಎನ್ನುವ ಕುರಿತು ಸಭೆ ನಡೆಸಿದ್ದೇನೆ. ಸೊರಬದಲ್ಲಿ 34% ರಷ್ಟು ಮಳೆ ಕಡಿಮೆಯಿದೆ. ಡೆಂಗ್ಯೂ ಪ್ರಕರಣಗಳು ಸಹ ಕಡಿಮೆಯಾಗಿದೆ. ಆರೋಗ್ಯ ಇಲಾಖೆಯಿಂದ ಜಾಗೃತಿ ಚೆನ್ನಾಗಿ ಆಗಿದೆ ಎಂದರು.

5% ಅತಿಥಿ ಶಿಕ್ಷಕರ ಸಮಸ್ಯೆ ನನ್ನ ಕ್ಷೇತ್ರದಲ್ಲಿದೆ. ನಮ್ಮ ಇಲಾಖೆಯಿಂದ ವಾರಪೂರ್ತಿ ಮೊಟ್ಟೆ ಕೊಡುತ್ತಿದ್ದೇವೆ. 1500 ಕೋಟಿ ರೂಪಾಯಿ ಅಜೀಮ್ ಪ್ರೇಮಜಿ ಫೌಂಡೇಷನ್ ನೀಡುತ್ತಿದೆ. ಮಕ್ಕಳಿಗೆ ಪೌಷ್ಟಿಕತೆ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಇನ್ನೂ ಮುಂದೆ ಆಗುವ ವಿಶ್ವಾಸ ಇದೆ ಎಂದರು.

ಮುಡಾ ಪ್ರಕರಣ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಗಳು ಸ್ಪಷ್ಟವಾಗಿ ಮಾಹಿತಿ ನೀಡಿ ಯಾವುದು ಭ್ರಷ್ಟಾಚಾರ ಆಗಿಲ್ಲ ಎಂದಿದ್ದಾರೆ. ಸಿಎಂ ತನಿಖೆ ಮಾಡಬೇಡಿ ಎಂದಿಲ್ಲ ತಾನೆ ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next