Advertisement

Krishna ನದಿಯಲ್ಲಿ ಹೆಚ್ಚುತ್ತಿರುವ ನೀರು- ಮತ್ತೊಮ್ಮೆ ಮೈದುಂಬಿ ಹರಿಯುತ್ತಿರುವ ಕೃಷ್ಣೆ

08:15 PM Aug 27, 2024 | Team Udayavani |

ರಬಕವಿ-ಬನಹಟ್ಟಿ: ಕಳೆದ 15 ದಿನಗಳ ಹಿಂದೆ ಪ್ರವಾಹ ಆತಂಕ ಸೃಷ್ಠಿಸಿದ್ದ ಕೃಷ್ಣಾ ನದಿ ಕೆಲ ದಿನಗಳಿಂದ ಇಳಿಮುಖವಾಗಿ ಜನತೆ ನಿರಾಳವಾಗುವಂತೆ ಮಾಡಿತ್ತು. ಈಗ ಮತ್ತೇ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರನ್ನು ಬಿಡುತ್ತಿರುವುದರಿಂದ ಆ.27ರ ಮಂಗಳವಾರ ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚುತ್ತಿದೆ.

Advertisement

content-img

ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ರಾಜಾಪುರ ಬ್ಯಾರೇಜ್ ನಿಂದ 73,875 ಕ್ಯೂಸೆಕ್ ನೀರು ಮತ್ತು ದೂಧಗಂಗಾ ನದಿಯ 19360 ಕ್ಯೂಸೆಕ್ ನೀರು ಕೃಷ್ಣಾ ನದಿಯನ್ನು ಸೇರುತ್ತಿದೆ. ಇದರಿಂದಾಗಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ 63290 ಕ್ಯೂಸೆಕ್ ಒಳ ಹರಿವು ಇದ್ದು, 62540 ಕ್ಯೂಸೆಕ್ ಹೊರ ಹರಿವು ಇದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ್ ತಿಳಿಸಿದರು.

ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 13.6 ಸೆಂ.ಮೀ, ನವುಜಾ: 13.9 ಸೆಂ.ಮೀ, ಮಹಾಬಳೇಶ್ವರ: 14ಸೆಂ. ಮೀ, ದೂಧಗಂಗಾ: 11.5 ಸೆಂ.ಮೀ, ರಾಧಾ ನಗರಿ: 8.5 ಸೆಂ.ಮೀ, ವಾರಣಾ: 8.5 ಸೆಂ.ಮೀ, ಮಳೆಯಾದ ಬಗ್ಗೆ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.