Advertisement
ಜಿಲ್ಲೆಯ ಚಿಂಚೊಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಬಳಿಯ ಹಳ್ಳದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.ನೀರು ಆವರಿಸಿರುವುದರಿಂದ ಕುರಿಗಳ ಸಾಗಿಸಲು ಕುರಿಗಾಹಿಗಳು ಹರಸಾಹಸ ಪಡಬೇಕಾಯಿತು. ಪ್ರತಿ ವರ್ಷ ಮಳೆಗಾಲದಲ್ಲೂ ಸೇತುವೆ ಮುಳುಗಡೆಯಿಂದಾಗಿ ಜನರ ಪರದಾಟ ತಪ್ಪುತ್ತಿಲ್ಲ. ಸತತ ಮಳೆಯಿಂದ ಕಲಬುರಗಿ ಜಿಲ್ಲೆಯಾದ್ಯಂತ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದೆ.
ಮೀನು ಹಿಡಿಯಲು ತೆರಳಿ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ:
ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಕೊಚ್ಚಿ ಹೋದ ಘಟನೆ ನಡೆದಿದೆ. ಕುರಕುಂಟಾ ಗ್ರಾಮದ ರಾಜು ನಾಮವಾರ (38) ಸತತ ಮಳೆಯ ನಡುವೆಯೂ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯವು ಮುಂದುವರಿದಿದ್ದು, ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಗಿಣಾ ನದಿ ಅಬ್ಬರಕ್ಕೆ ಉತ್ತರಾಧಿಮಠದ ಗೋ ಶಾಲೆಗೂ ಜಲ ದಿಗ್ಬಂಧನ ಹಾಕಿದೆ. ಪ್ರಮುಖವಾಗಿ ಸೋಮವಾರದ
ಜಯತೀರ್ಥರ ಪೂಜಾ ಕೈಂಕರ್ಯಕ್ಕೂ ವರ್ಷಧಾರೆ ಅಡ್ಡಿ ಉಂಟು ಮಾಡಿದೆ. ನದಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಮೂಲ ಬೃಂದಾವನ ಮುಳುಗಡೆಯಾಗಿದೆ. ಕಾಗಿಣಾ ನದಿ ಅಬ್ಬರಕ್ಕೆ ಉತ್ತರಾಧಿಮಠ ಅಕ್ಷರಶಃ ನಲುಗಿದೆ.
Related Articles
Advertisement
ಉತ್ತರಾಧಿಮಠದ ಗೋ ಶಾಲೆಯಲ್ಲಿ 40ಕ್ಕೂ ಹೆಚ್ಚು ಗೋವುಗಳಿದ್ದು ಸತತ ಮಳೆಯಿಂದಾಗಿ ಈಗ ಮೇವಿಗೂ ಸಮಸ್ಯೆ ಎದುರಾಗಿದೆ. ನಮ್ಮಲ್ಲಿ ಒಂದು ದಿನ ಮಟ್ಟಿಗೆ ಮೇವು ಶೇಖರಣೆ ಇದ್ದು, ನಾಳೆ ಗೋವುಗಳಿಗೆ ಸಂಕಷ್ಟ ಎದುರಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಮೇವು ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ನದಿ ನೀರಿನ ಪ್ರಮಾಣದಲ್ಲಿ ಕ್ಷಣ ಕ್ಷಣವೂ ಹೆಚ್ಚಾಗುತ್ತಲೇ ಇದೆ. ಮಠದ ಒಳಗಡೆ ತೆರಳಲು ಆಗುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ಮೇಲೆ ಜಯತೀರ್ಥರ ಪೂಜೆ ನಡೆಯುತ್ತೆ. ಅಲ್ಲಿಯವರೆಗೆ ಪೂಜಾ ಕೈಂಕರ್ಯ ನಡೆಯುವುದಿಲ್ಲ ಎಂದು ಉತ್ತರಾಧಿಮಠದ ಅರ್ಚಕರು ತಿಳಿಸಿದರು.