Advertisement
ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳ ಒಳ ಮತ್ತು ಹೊರಭಾಗಗಳು ಹೆಚ್ಚು ಆಕರ್ಷಣೆಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಮೊದಲ ಹಂತವಾಗಿ ಕೆ.ಎಚ್.ರಸ್ತೆ ಕಡೆಯ (ಡಬಲ್ ರಸ್ತೆ) ಪ್ರವೇಶ ದ್ವಾರದ ಒಳಭಾಗದ ಜೋಡಿ ರಸ್ತೆ ಬದಿ ಆಕರ್ಷಕ ಭೂವಿನ್ಯಾಸ (ಲ್ಯಾಂಡ್‌ಸ್ಕೇಪಿಂಗ್) ಮೂಲಕ ಅಂದಗೊಳಿಸುವ ಕಾಮಗಾರಿ ಶುರುವಾಗಿದೆ.
Related Articles
Advertisement
ಹೊಸ ಸಸ್ಯಗಳ ಮೆರುಗು: ಲಾಲ್‌ಬಾಗ್‌ನ ವಿವಿಧೆಡೆಗಳಲ್ಲಿ ಚೆಂಡು ಹೂವು, ಸೇವಂತಿಗೆ, ಜೇವಿಯ, ಫ್ಲಕ್ಸ್, ಪೆಟ್ರಿಮಿಯಾ, ಡೇಲಿಯಾ, ಟೆರ್ರಿವಿಯಂ ಹೂವಿನ ಗಿಡಗಳು ಸೇರಿದಂತೆ ಸುಮಾರು 300ರಿಂದ 400 ಪ್ರಭೇದದ ಗಿಡಗಳನ್ನು ನೆಡಲಾಗುತ್ತಿದೆ. ಜತೆಗೆ ಈಗಾಗಲೇ ಲಾಲ್‌ಬಾಗ್‌ನ ಹಲವೆಡೆ 250ಕ್ಕೂ ಹೆಚ್ಚು ಗುಂಡಿ ತೆಗೆಯಲಾಗಿದ್ದು, ಸುಮಾರು 300ರಿಂದ 400 ಜಾತಿಯ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 20ಕ್ಕೂ ಹೆಚ್ಚು ಪ್ರಭೇದದ ಮರದ ಸಸಿಗಳನ್ನು ಹೈದರಾಬಾದ್ ಮತ್ತು ಪುಣೆಯಿಂದ ತರಿಸಲಾಗುತ್ತಿದೆ.
ಖರ್ಚು-ವೆಚ್ಚ: ಹೂವಿನ ಗಿಡಗಳು, ಮರದ ಸಸಿಗಳು, ಡಬಲ್ ರೋಡ್ ಲ್ಯಾಂಡ್ ಸ್ಕೇಪಿಂಗ್ ಹಾಗೂ ಕೆಂಪುಮಣ್ಣು, ಮರಳು, ಗೊಬ್ಬರ ಇತ್ಯಾದಿಗಳ ವೆಚ್ಚ ಸೇರಿದಂತೆ ಈ ಯೋಜನೆಗೆ ಸುಮಾರು 40ರಿಂದ 45 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆಕರ್ಷಕ ಲ್ಯಾಂಡ್‌ಸ್ಕೇಪಿಂಗ್, ಹೂವಿನ ಗಿಡಗಳ ನೆಡುವ ಕಾರ್ಯ ಶೀಘ್ರವೇ ಆರಂಭಿಸಲಿದ್ದು, ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಪನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ತಗಲುವ ವೆಚ್ಚವನ್ನು ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್ ಮತ್ತು ಸುವರ್ಣ ಕರ್ನಾಟಕ ಉದ್ಯಾನ ಟ್ರಸ್ಟ್ ಮೂಲಕ ಭರಿಸಲಾಗುವುದು. ಸಸಿಗಳನ್ನು ನೆಡಲು ಮಳೆಗಾಲ ಉತ್ತಮವಾಗಿರುವುದರಿಂದ ಆರೈಕೆ ಸುಲಭ. ಜತೆಗೆ ಉದ್ಯಾನವನ್ನು ಹೆಚ್ಚು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಈ ಕಾಮಗಾರಿ ಆರಂಭಿಸಲಾಗಿದೆ.-ಡಾ. ಎಂ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ * ವಿಶೇಷ ವರದಿ