Advertisement

ಪ್ರವಾಸಿಗರಿಗೆ ಸಿಹಿಸುದ್ದಿ; ಶೀಘ್ರವೇ ದೆಹಲಿ ಟು ಲಂಡನ್ ಬಸ್ ಸೌಲಭ್ಯ; 18 ದೇಶಗಳ ಸುತ್ತಾಟ!

12:09 PM Feb 17, 2022 | ನಾಗೇಂದ್ರ ತ್ರಾಸಿ |

ನವದೆಹಲಿ: ಒಂದು ವೇಳೆ ನಾವು ವಿದೇಶ ಪ್ರಯಾಣ ಕೈಗೊಳ್ಳುವುದಿದ್ದರೆ, ನಮಗೆ ಇರುವ ಏಕೈಕ ಮಾರ್ಗ ಅದು ವಿಮಾನ ಪ್ರಯಾಣ. ಆದರೆ ಇನ್ಮುಂದೆ ನಮ್ಮ ಆಲೋಚನೆಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬಹುದು. ಹೌದು ಶೀಘ್ರದಲ್ಲಿಯೇ ಭಾರತದಿಂದ ಲಂಡನ್ ವರೆಗೆ ಬಸ್ ನಲ್ಲೇ ಪ್ರಯಾಣಿಸಬಹುದಾಗಿದೆ! ಈ ನೂತನ ಐಶಾರಾಮಿ ಸೌಲಭ್ಯದಿಂದ ಭಾರತ ಮತ್ತು ಮ್ಯಾನ್ಮಾರ್ ಗಡಿ ಉದ್ವಿಗ್ನತೆ ಶಮನವಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:1.20 ಕೋಟಿ ಮಕ್ಕಳಲ್ಲಿ 600 ಮಕ್ಕಳಿಂದ ಹಿಜಾಬ್‍ಗಾಗಿ ಹಠ: ಬಿ.ಸಿ ನಾಗೇಶ್

70 ದಿನಗಳು, 18 ದೇಶಗಳ ಸುತ್ತಾಟ:

ಮೂಲಗಳ ಪ್ರಕಾರ, ನವದೆಹಲಿ ಟು ಲಂಡನ್ ಬಸ್ ಸೌಲಭ್ಯ ಸೆಪ್ಟೆಂಬರ್ ನಿಂದ ಐಶಾರಾಮಿ, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರಂಭವಾಗಲಿದೆ. ಬಸ್ ತೆರಳುವ ಮಾರ್ಗ ಅಂತಿಮವಾದ ಕೂಡಲೇ ಪ್ರಯಾಣಿಕರು ಸಾಹಸದ ಲಂಡನ್ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ. ಈ ಅತ್ಯಾಧುನಿಕ ಸೌಲಭ್ಯದ ಬಸ್ 70 ದಿನಗಳ ಕಾಲ 20,000 ಸಾವಿರ ಕಿಲೋ ಮೀಟರ್ ಕ್ರಮಿಸುವ ಮೂಲಕ 18 ದೇಶಗಳಲ್ಲಿ ಸುತ್ತಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:150 ಗಡಿ, 15 ದೇಶ ದಾಟಿ ಲಂಡನ್ ನಿಂದ ಭಾರತಕ್ಕೆ ಸಂಚರಿಸುತ್ತಿದ್ದ ಬಸ್ ಯಾನದ ಬಗ್ಗೆ ಗೊತ್ತಾ!

Advertisement

ನವದೆಹಲಿಯಿಂದ ಲಂಡನ್ ಗೆ ಬಸ್ ನಲ್ಲಿ ಪ್ರಯಾಣಿಸಲು ಒಬ್ಬ ಪ್ರಯಾಣಿಕನಿಗೆ 15 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ಇದರಲ್ಲಿ ಬಸ್ ಟಿಕೆಟ್, ವೀಸಾ, ವಿವಿಧ ದೇಶಗಳಲ್ಲಿ ವಾಸ್ತವ್ಯ ಹೂಡುವ ಲಾಡ್ಜಿಂಗ್ ವೆಚ್ಚ ಕೂಡಾ ಸೇರಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಊಟೋಪಚಾರ, ಮದ್ಯಪಾನ ಹಾಗೂ ಮಲಗುವ ವ್ಯವಸ್ಥೆ ಮಾಡಲಾಗಿದೆ. ಈ ಬಸ್ 20 ಆಸನಗಳನ್ನು ಹೊಂದಿದ್ದು, ಪ್ರತಿ ಪ್ರಯಾಣಿಕರಿಗೆ ಅವರ ಕ್ಯಾಬಿನ್ ನಿಗದಿಪಡಿಸಲಾಗುತ್ತದೆ.

ಮೂಲಗಳ ಪ್ರಕಾರ, ಈ ಬಸ್ ಸೇವೆಯು ಮ್ಯಾನ್ಮಾರ್, ಥಾಯ್ ಲ್ಯಾಂಡ್, ಚೀನಾ ಮತ್ತು ಕರ್ಜೈಸ್ತಾನ್ ಮೂಲಕ ಫ್ರಾನ್ಸ್ ಗೆ ಪ್ರಯಾಣಿಸಲಿದೆ. ಇದಲ್ಲದೇ ಇಂಗ್ಲೆಂಡ್ ಗೆ ಭೇಟಿ ನೀಡಲು ಕ್ರೂಸ್ ಹಡಗನ್ನು ಸಹ ಬಳಸಲಾಗುತ್ತದೆ. ನಂತರ ಫ್ರಾನ್ಸ್ ನಿಂದ ಯುನೈಟೆಡ್ ಡೋವರ್ ಗೆ ತೆರಳಲು ಬೋಟ್ ಅನ್ನು ಬಳಸಲಾಗುತ್ತದೆ ಎಂದು ತಿಳಿಸಿದೆ.

ನವದೆಹಲಿಯಿಂದ ಲಂಡನ್ ಗೆ ಬಸ್ ಪ್ರಯಾಣ ಹೊಸ ಪ್ರಯೋಗವೇನು ಅಲ್ಲ, ಇದೇ ರೀತಿಯ ಬಸ್ ಸೇವೆ ಸುಮಾರು 65 ವರ್ಷಗಳ ಹಿಂದೆ ಬ್ರಿಟಿಷ್ ಬಸ್ ಕಂಪನಿಯ ಆಲ್ಬರ್ಟ್ ಟೂರ್ಸ್ ಆರಂಭಿಸಿತ್ತು. 1957ರಲ್ಲಿ ಕೋಲ್ಕತಾ ಟು ಲಂಡನ್ ಗೆ ಬಸ್ ಸೇವೆ ಆರಂಭಗೊಂಡಿತ್ತು. ಇದು “ಹಿಪ್ಪಿ ರೂಟ್” ಎಂದೇ ಜನಪ್ರಿಯಗೊಂಡಿತ್ತು. 1976ರವರೆಗೂ ಈ ಡಬಲ್ ಡೆಕರ್ ಬಸ್ ಸೇವೆ ಮುಂದುವರಿದಿದ್ದು, ಕೆಲವು ಅಪಘಾತ ಪ್ರಕರಣ ಹಾಗೂ ದೇಶಗಳ ನಡುವಿನ ಗಡಿ ಸಮಸ್ಯೆ ಹೆಚ್ಚಳವಾದ ನಂತರ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next