ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಬಾೖ ಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗ ರನ್ನು ಅಂತಾರಾಷ್ಟ್ರೀಯ ವಿಮಾನ ಯಾನ ಆರಂಭವಾದ ತತ್‌ಕ್ಷಣ ಭಾರತಕ್ಕೆ ಕಳುಹಿಸಲಾಗುವುದು ಎಂದು ದುಬಾೖಯಲ್ಲಿನ ಭಾರತೀಯ ರಾಯಭಾರಿ ವಿಪುಲ್ ಷಾ ಅವರು ಭರವಸೆ ನೀಡಿದ್ದಾರೆ.
ಪ್ರಪಂಚಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್ 19 ವೈರಸ್‌ನಿಂದ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಂಕಷ್ಟ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಲು ದುಬಾೖ ಅನಿವಾಸಿ ಕನ್ನಡಿಗರು ದುಬಾೖಯಲ್ಲಿರುವ ಕಾನ್ಸುಲೇಟ್ ಜನರಲ್ ವಿಪುಲ್ ಷಾ ಮತ್ತಿತರರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ವಿಮಾನಯಾನ ಪುನರಾರಂಭ ವಾದಾಗ ಯುಎಇಯಲ್ಲಿರುವ ಅನಿವಾಸಿಗಳನ್ನು ದೇಶಕ್ಕೆ ಕರೆಯಿಸಿ ಕೊಳ್ಳುವ ಕುರಿತು ಈ ವರೆಗೆ ಯಾವುದೇ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿಲ್ಲ, ಶೀಘ್ರವೇ ವಿದೇಶಾಂಗ ಸಚಿವಾಲಯ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದೂ ಷಾ ಹೇಳಿದ್ದಾರೆ.
“ವಿಮಾನಯಾನ ಶುರುವಾದಾಗ ಗರ್ಭಿಣಿಯರಿಗೆ, ಹಿರಿಯರಿಗೆ, ತುರ್ತುಚಿಕಿತ್ಸೆ ಆವಶ್ಯಕತೆ ಇರುವ ವರಿಗೆ, ಕೆಲಸ ಕಳೆದುಕೊಂಡ ಅನಿವಾಸಿ ಭಾರತೀಯರಿಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ದುಬಾೖ ಅನಿವಾಸಿ ಕನ್ನಡಿಗರ ಸಂಘದ ಅಧ್ಯಕ್ಷ, ಉದ್ಯಮಿ ನವೀದ್ ಮಾಗುಂಡಿ ಒತ್ತಾಯಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ವಿಪುಲ್ ಷಾ, ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಐಸೊಲೇಶನ್ ವಾರ್ಡ್ ವ್ಯವಸ್ಥೆ ಕುರಿತು ಉದ್ಯಮಿ ಹಿದಾಯತ್ ಅಡೂxರು ಪ್ರಶ್ನೆಗೆ ಉತ್ತರಿಸಿದ ವಿಪುಲ್, ಉದ್ಯಮಿ ಆಜಾದ್ ಮುಪೇನ್ ಒಡೆತನದ ಆಸ್ಪತ್ರೆಯಾದ ಆಸ್ಟರ್ ಗ್ರೂಪಿನಿಂದ ಹಲವಾರು ಡಾಕ್ಟರ್ ಮತ್ತು ನರ್ಸ್‌ಗಳು ಭಾರತೀಯ ಅನಿವಾಸಿಗಳ ಒಕ್ಕೂಟ ದಿಂದ ಕ್ವಾರಂಟೈನ್ ಮಾಡಿರುವ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಅನಿವಾಸಿ ಭಾರತೀಯ ರಿಗೆ ಕೋವಿಡ್ ವೈರಸ್ ಸೋಂಕು ದೃಢಪಟ್ಟು ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯಲು ವಿಳಂಬ ವಾದರೆ ಕೂಡಲೇ ಕಾನ್ಸು ಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ವಿಮಾನ ಆರಂಭವಾದಾಗ ಭಾರತಕ್ಕೆ ಮರಳಲು ಇಚ್ಛಿಸುವ ಬಡ ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಶಾರ್ಜಾ ಕರ್ನಾಟಕ ಸಂಘದ ಪೋಷಕ ಹರೀಶ್ ಶೇರಿಗಾರ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ವಿಪುಲ್, ನಾವು “ಇಂಡಿಯನ್ ಕಮ್ಯೂನಿಟಿ ವೆಲ್ಫೆàರ್ ಫಂಡ್’ ಬಳಸಿ ಅನುಕೂಲ ಒದಗಿಸುತ್ತೇವೆ. ಅದೇ ರೀತಿ, ಭಾರತೀಯ ಉದ್ಯಮಿ ಗಳು, ಅನಿವಾಸಿ ಸಂಘಟನೆಗಳ ಸಹಾಯ ಪಡೆದು ಹೆಚ್ಚಿನ ಭಾರತೀಯರಿಗೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು’ ಎಂದರು.
ವೀಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ದುಬಾೖ ಅನಿವಾಸಿ ಕನ್ನಡಿಗರ ಸಂಘದ ಉಪಾಧ್ಯಕ್ಷ ಸುನಿಲ್ ಅಂಬಲತರೆ, ಬಸವ ಸಮಿತಿ ದುಬಾೖ ಸಂಸ್ಥೆಯ ಪರವಾಗಿ ಚಂದ್ರಶೇಖರ್ ಲಿಂಗದ ಹಳ್ಳಿ, ಹಿದಾಯತ್ ಅಡೂxರು, ಕರ್ನಾಟಕ ಸಂಘ ದುಬಾೖ ಪ್ರ. ಕಾರ್ಯದರ್ಶಿ ದಯಾ ಕಿರೋಡಿ ಯನ್, ಉದ್ಯಮಿ ರೊನಾಲ್ಡ… ಮಾರ್ಟಿಸ್ ಪಾಲ್ಗೊಂಡಿದ್ದರು.