Advertisement

ಐಎಎಸ್ ಪರೀಕ್ಷೆಗೆ ಕೋಚಿಂಗ್ ಪಡೆಯುವವರಿಗೆ ಸೋನು ಸೂದ್ ನೆರವು..!

01:37 PM Jun 13, 2021 | Team Udayavani |

ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಆದಾಗಿನಿಂದ ಇಲ್ಲಿಯವರೆಗೂ ನಟ ಸೋನು ಸೂದ್ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಅನೇಕರಿಗೆ ಸೋನು ಸೂದ್ ಸಹಾಯಸ್ತ ಚಾಚಿದ್ದಾರೆ. ಇದೀಗ ಮತ್ತೊಂದು ರೀತಿಯಲ್ಲಿ ಜನರಿಗೆ ನೆರವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿರುವವರಿಗೆ ಸಹಾಯಹಸ್ತ ಚಾಚಿದ್ದಾರೆ.

Advertisement

ಸೋನು ಸೂದ್ ಮತ್ತು ದೆಹಲಿಯ ಯುವ ಸಂಘಟನೆ ದಿಯಾ ಜೊತೆಗೂಡಿ ಸಂಭವಂ ಎಂಬ ಯೋಜನೆಯನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿರುವ ಸ್ಪರ್ಧಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಸ್ಕಾಲರ್​​ಶಿಪ್ ನೀಡಲಾಗುತ್ತದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ, ನೀವು ಐಎಎಸ್ ತಯಾರಿ ಮಾಡುತ್ತಿದ್ದರೆ, ನಾವು ಅದರ ಜವಾಬ್ದಾರಿಯನ್ನು ಹೊರುತ್ತೇವೆ ಎಂದು ಹೇಳುವ ಮೂಲಕ ಆಫರ್ ಬಗ್ಗೆ ತಿಳಿಸಿದ್ದಾರೆ.

ಐಎಎಸ್ ಕೋಚಿಂಚ್  ಪಡೆಯಬಯಸುವವರು www.soodcharityfoundation.org ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದರ ಕೊನೆಯ ದಿನಾಂಕ ಜೂನ್ 30 ಎಂಬ ಮಾಹಿತಿಯನ್ನು ಸೋನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next