Advertisement
ಈ ಆ್ಯಪ್ ಬಿಡುಗಡೆ ಮಾಡಿದ ಸುದ್ದಿಯನ್ನು ಅವರು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ವಿದ್ಯಾರ್ಥಿವೇತನವನ್ನು ಗೆಲ್ಲಬಹುದು ಎಂದು ಅವರು ಹೇಳಿದ್ದಾರೆ. 100ರಿಂದ ಕೋಟಿ ರೂಪಾಯಿಗಳ ವರೆಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ಕಳೆದ ವಾರವಷ್ಟೇ ಸೋನು ತನ್ನ ತಾಯಿ ಸರೋಜ್ ಹೆಸರಿನಲ್ಲಿ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿದ್ದರು. ಇದಕ್ಕಾಗಿ 10 ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೋಜನೆಯ ಸ್ಪಷ್ಟ ಜಾರಿಗೆ ಕೆಲವು ಷರತ್ತುಗಳನ್ನೂ ನಿಗದಿಪಡಿಸಲಾಗಿದೆ. ವಾರ್ಷಿಕ ಆದಾಯವು ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ, ಅವರು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸೋನು ಹೇಳಿದ್ದಾರೆ. ಅವರ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು. ಇದಕ್ಕಾಗಿ ಸೋನು ಅವರ ತಾಯಿ ಪ್ರೋ. ಸರೋಜ ಸೂದ್ ಅವರ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲು ದೇಶಾದ್ಯಂತದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
Related Articles
ಇದಕ್ಕೂ ಮೊದಲು ಸೋನು ಜುಲೈ ಕೊನೆಯ ವಾರದಲ್ಲಿ “ಪ್ರವಾಸಿ ರೋಜಗಾರ್ ಆ್ಯಪ್’ ಬಿಡುಗಡೆ ಮಾಡಿದ್ದರು. ಇದು ವಲಸಿಗರಿಗೆ ಉದ್ಯೋಗ ಹುಡುಕಲು ಅಗತ್ಯವಾದ ಮಾಹಿತಿ ಮತ್ತು ಸರಿಯಾದ ಲಿಂಕ್ ಅನ್ನು ಒದಗಿಸುತ್ತದೆ. ಈ ಆ್ಯಪ್ ಮೂಲಕ 500ಕ್ಕೂ ಹೆಚ್ಚು ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಇದು ಜುಲೈ 23ರಂದು ಪ್ರಾರಂಭವಾಗಿದ್ದು, ಇದಕ್ಕಾಗಿ ದಿಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಅಹಮದಾಬಾದ್ ಮತ್ತು ತಿರುವನಂತಪುರಂ ಸೇರಿದಂತೆ 7 ನಗರಗಳಲ್ಲಿ 24 ಗಂಟೆಗಳ ಸಹಾಯವಾಣಿ ಮತ್ತು ವಲಸೆ ನೆರವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
Advertisement
ದೇಶಾದ್ಯಂತ ಲಾಕ್‌ಡೌನ್ ಜಾರಿಯಾದಾಗಿನಿಂದ ಜನರಿಗೆ ಸಹಾಯ ಮಾಡಲು ಸೋನು ಸೂದ್ ಸಜ್ಜಾಗಿದ್ದರು. ಮಹಾರಾಷ್ಟ್ರ ಪೊಲೀಸರಿಗೆ ಕೋವಿಡ್ ಸೆಕ್ಯುರಿಟಿ ಕಿಟ್, ಪ್ರವಾಹ ಪೀಡಿತ ಜನರಿಗೆ ಮನೆ, ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್, ಆಹಾರ ಇತ್ಯಾದಿಗಳು ಅವುಗಳಲ್ಲಿ ಸೇರಿದ್ದು, ಇವು ಕೆಲವೇ ಉದಾಹರಣೆಗಳಾಗಿವೆ.