Advertisement

ರಿಯಲ್ ಹೀರೋ ಸೋನು ಸೂದ್; ನಿಸರ್ಗ ಸೈಕ್ಲೋನ್ ನಿಂದ 28 ಸಾವಿರ ಮಂದಿ ಸೇಫ್!

08:54 PM Jun 04, 2020 | Nagendra Trasi |

ನವದೆಹಲಿ:ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದ ನಟ, ನಿರ್ಮಾಪಕ, ರೂಪದರ್ಶಿ ಸೋನು ಸೂದ್ ಇದೀಗ ಲಾಕ್ ಡೌನ್ ಆರಂಭವಾದ ವೇಳೆಯಲ್ಲಿ ಮಾನವೀಯತೆ ಮೆರೆದು ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಆಗಿಬಿಟ್ಟಿದ್ದಾರೆ. ಲಾಕ್ ಡೌನ್ ನಿಂದ ದೇಶದ ವಿವಿಧ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಾವಿರಾರು ಮಂದಿ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಊರು
ಸೇರಲು ಬಸ್ ಹಾಗೂ ರೈಲು ಸೇವೆ ಒದಗಿಸಿದ್ದರು.

Advertisement

ನಿಸರ್ಗ ಸೈಕ್ಲೋನ್ ನಿಂದ 28 ಸಾವಿರ ಜನರು ಸೇಫ್:
ಮುಂಬೈ ಕರಾವಳಿ ಪ್ರದೇಶದಲ್ಲಿರುವ ಸುಮಾರು 28 ಸಾವಿರ ಜನರಿಗೆ ಆಹಾರ ವಿತರಿಸಿರುವ ಸೋನು ಸೂದ್ ಹಾಗೂ ಅವರ ತಂಡ ಬುಧವಾರ ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಬಡಿದಪ್ಪಳಿಸುವ ಮುನ್ನವೇ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿಬಿಟ್ಟಿತ್ತು.

ಪಿಟಿಐ ನ್ಯೂಸ್ ಏಜೆನ್ಸಿಯ ಪ್ರಕಟಣೆ ಪ್ರಕಾರ, ಇಂದು ಎಲ್ಲರೂ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ನೆರವು ನೀಡುವ ಮೂಲಕ ಬಲವಾದ ಬೆಂಬಲವನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ತಂಡ ಮತ್ತು ನಾನು ಮುಂಬೈ ಕರಾವಳಿ ಪ್ರದೇಶದಲ್ಲಿರುವ 28ಸಾವಿರಕ್ಕೂ ಅಧಿಕ ಮಂದಿಗೆ ಊಟೋಪಚಾರ ನೀಡಿದ್ದು, ವಿವಿಧ ಶಾಲಾ, ಕಾಲೇಜುಗಳಲ್ಲಿ ಪುನರ್ವಸತಿ ಮಾಡಿಕೊಡಲಾಗಿತ್ತು. ಇದರಿಂದಾಗಿ
ಎಲ್ಲರೂ ಸುರಕ್ಷಿತರಾಗಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ 200 ಮಂದಿ ಅಸ್ಸಾಂನ ವಲಸಿಗರು ನಿಸರ್ಗ ಸೈಕ್ಲೋನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಊರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ನಿಸರ್ಗ ಸೈಕ್ಲೋನ್ ಮುಂಬೈನಿಂದ 95 ಕಿಲೋ ಮೀಟರ್ ದೂರವಿರುವ ಅಲಿಬಾಗ್ ಮತ್ತು ರಾಯ್ ಗಢ್ ಜಿಲ್ಲೆಯ ಕರಾವಳಿ ಪ್ರದೇಶಕ್ಕೆ ಬಡಿದಪ್ಪಳಿಸಿತ್ತು. ಈವರೆಗೆ ಮೂವರು ಮಂದಿ ಸಾವನ್ನಪ್ಪಿದ್ದಾರೆ. ನಿಸರ್ಗ ಚಂಡಮಾರುತ ತನ್ನ ದಿಕ್ಕನ್ನು ಸ್ವಲ್ಪ ಬದಲಾಯಿಸಿದ್ದರಿಂದ ನಾವು ನಿರೀಕ್ಷಿಸಿದ್ದಕ್ಕಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next