ಮುಂಬೈ: ಕೋವಿಡ್ ಆರಂಭದ ಕಾಲದಿಂದಲೂ ರಿಯಲ್ ಲೈಫ್ ಹೀರೋ ಆಗಿ ಗುರುತಿಸಿಕೊಂಡಿರುವ ಸೋನು ಸೂದ್ ಇದೀಗ 25,000 ಫೇಸ್ ಶೀಲ್ಡ್ ಗಳನ್ನು ಮುಂಬೈ ಪೊಲೀಸ್ ಸಿಬ್ಬಂದಿಗಳಿಗೆ ವಿತರಣೆ ಮಾಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಸೋನು ಸೂದ್ ಅವರ ಈ ಸಾಮಾಜಿಕ ಕಾರ್ಯದ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 25,000 ಫೇಸ್ ಶೀಲ್ಡ್ ಗಳನ್ನು ಪೊಲೀಸರಿಗೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೇ ನೀಡಿದ ಸೋನು ಸೂದ್ “ಕೋವಿಡ್ ಸಮಯದಲ್ಲಿ ಕರ್ತವ್ಯನಿಷ್ಠೆ ಮೆರಯುತ್ತಿರುವ ಪೊಲೀಸ್ ಸಹೋದರ ಸಹೋದರಿಯರು ನಿಜವಾದ ಹೀರೋಗಳು, ಅವರು ತೋರುತ್ತಿರುವ ಸಾಮಾಜಿಕ ಕಳಕಳಿಗೆ ನಾನು ನೀಡಬಹುದಾದ ಅಲ್ಪ ಸೇವೆ ಇದು ಎಂದಿದ್ದಾರೆ.
Related Articles
ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ಆರ್ಭಟ ಆರಂವಾದಗಿನಿಂದ ನಟ ಸೋನು ಸೂದ್ ಹೆಚ್ಚೆಚ್ಚು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಮಹಾರಾಷ್ಟ್ರದಲ್ಲಿ ವಿವಿಧ ಕಡೆಗಳಲ್ಲಿ ಸಿಲುಕಿದ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದರು. ಮಾತ್ರವಲ್ಲದೆ ಕಾರ್ಮಿಕರಿಗೆ ವಿಶೇಷವಾಗಿ 10 ಬಸ್ ಗಳ ವ್ಯವಸ್ಥೆಯನ್ನು ಕೂಡ ಮಾಡಿದ್ದರು ಅದರ ಜೊತೆಗೆ ತಮ್ಮ ಐಶಾರಾಮಿ ಹೊಟೇಲನ್ನು ಕೋವಿಡ್ ವಿರುದ್ಧ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರಿಗೆ ಮತ್ತು ನರ್ಸ್ಗಳಿಗೆ ಬಿಟ್ಟುಕೊಟ್ಟಿದ್ದರು.