Advertisement

ಸೋನು ನಿಗಮ್‌ ಈಗ BALD ಆಗಿದ್ದಾರೆ; ಮೌಲ್ವಿ 10 ಲಕ್ಷ ಕೊಡ್ತಾರಾ ?

04:10 PM Apr 19, 2017 | udayavani editorial |

ಹೊಸದಿಲ್ಲಿ : ಮೊನ್ನೆ ಸೋಮವಾರ ಬೆನ್ನು ಬೆನ್ನಿಗೆ ನಾಲ್ಕು ಸರಣಿ ಟ್ವೀಟ್‌ ಮಾಡಿ ಮಸೀದಿಗಳಲ್ಲಿ ಧ್ವನಿ ವರ್ಧಕದ ಮೂಲಕ ಮಾಡಲಾಗುವ ಬೆಳಗ್ಗಿನ ಪ್ರಾರ್ಥನೆ ಆಝಾನ್‌ನಿಂದ ತನಗಾಗುತ್ತಿರುವ ಕಿರಿಕಿರಿಯನ್ನುಬಹಿರಂಗಪಡಿಸಿ ವಾದ-ವಿವಾದಕ್ಕೆ ಗುರಿಯಾಗಿದ್ದರು. 

Advertisement

‘ಧ್ವನಿವರ್ಧಕದ ಆಝಾನ್‌ಗೆ ವಿರೋಧ ವ್ಯಕ್ತಪಡಿಸಿದ್ದ ಸೋನು ನಿಗಮ್‌ ಅವರ ತಲೆಯನ್ನು ಯಾರಾದರೂ ಬೋಳಿಸಿ ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದವರಿಗೆ ತಾನು 10 ಲಕ್ಷ ರೂ. ಇನಾಮು ಕೊಡುವುದಾಗಿ’ ಮುಸ್ಲಿಂ ಮೌಲ್ವಿಯೋರ್ವರು ಘೋಷಿಸಿದ್ದರು. 

ಇದಕ್ಕೆ ಅತ್ಯಂತ ದಿಟ್ಟತನದಿಂದ ಕ್ರಿಯಾತ್ಮಕವಾಗಿ ಉತ್ತರಿಸಿರುವ ಸೋನು ನಿಗಮ್‌ ಅವರು ತಾವೇ ಖುದ್ದು ತಮ್ಮ ತಲೆಯನ್ನು ಬೋಳಿಸಿಕೊಂಡು 10 ಲಕ್ಷ ರೂ.ಗಳ ಇನಾಮನ್ನು ತನಗಾಗಿ ಸಿದ್ಧಪಡಿಸಿಡುವಂತೆ ಆ ಮುಸ್ಲಿಂ ಮೌಲ್ವಿಗೆ ಕರೆ ನೀಡಿದ್ದಾರೆ. 

ಇವತ್ತು ಸೋನು ನಿಗಮ್‌ ಮಾಡಿರುವ ಟ್ವೀಟ್‌ ಹೀಗಿದೆ : “ಇವತ್ತು ಮಧ್ಯಾಹ್ನ 2 ಗಂಟೆಗೆ ಆಲೀಮ್‌ ನಾನಿರುವ ಸ್ಥಳಕ್ಕೆ ಬಂದ ನನ್ನ ತಲೆ ಬೋಳಿಸಲಿದ್ದಾರೆ; ಮೌಲ್ವಿಯವರೇ, ನೀವು ನನಗಾಗಿ ಹತ್ತು ಲಕ್ಷ ರೂ. ತಯಾರಾಗಿಡಿ !’.

ಮೊನ್ನೆ ಸೋಮವಾರ ದಿನ ಸೋನು ನಿಗಮ್‌ ಮಾಡಿದ್ದ ಟ್ವೀಟ್‌ಗಳು ಹೀಗಿದ್ದವು : 

Advertisement

“ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ. ನಾನು ಮುಸ್ಲಿಂ ಅಲ್ಲ; ಆದರೆ ದಿನನಿತ್ಯ ಬೆಳಗ್ಗೆ ಅಝಾನ್‌ ನನ್ನನ್ನು ಎಚ್ಚರಿಸುತ್ತದೆ. ಇಂತಹ ಒತ್ತಾಯದ ಧಾರ್ಮಿಕತೆ ನಿಲ್ಲುವುದಾದರೂ ಎಂದು ?’

“ಅಂದ ಹಾಗೆ ಪ್ರವಾದಿ ಮೊಹಮ್ಮದರು ಇಸ್ಲಾಂ ಧರ್ಮವನ್ನು ಸ್ಥಾಪಿಸುವಾಗ ವಿದ್ಯುತ್‌ ಇರಲಿಲ್ಲ; ಆದರೆ ಎಡಿಸನ್‌ ನಂತರದಲ್ಲಿ ನನಗೇಕೆ ಈ ಸದ್ದು ಕೇಳುವ ಗತಿ ಬಂದಿದೆ ?’.

“ವಿದ್ಯುತ್‌ ಬಳಸಿಕೊಂಡು  ಧರ್ಮ ಪ್ರತಿಪಾದಿಸುವ, ನಿದ್ದೆ ಕೆಡಿಸುವ ಯಾವುದೇ ದೇವಾಲಯ, ಗುರುದ್ವಾರದ ಮೇಲೆ ನನಗೆ ನಂಬಿಕೆ ಇಲ್ಲ – ಮತ್ತೇಕೆ ? ಪ್ರಾಮಾಣಿಕ ? ಸತ್ಯ ?’.

ಅದಾದ ಬಳಿಕ ಇಂದು ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಅವರು “ಅಝಾನ್‌ಗೆ ಧ್ವನಿವರ್ಧಕ ಕಡ್ಡಾಯವಲ್ಲ; ಇಂದು ಹೆಚ್ಚಿನವರ ಮೊಬೈಲ್‌ಗ‌ಳಲ್ಲಿ ಅಝಾನ್‌ ಕೇಳಬಹುದು. ಅಝಾನ್‌ ಘಂಟೆಗಳಿವೆ. ಹೀಗಾಗಿ ಇಂದಿನ ದಿನಗಳಲ್ಲಿ ಅಝಾನ್‌ಗೆ ಧ್ವನಿವರ್ಧಕದ ಅಗತ್ಯವಿಲ್ಲ’ ಎಂದು ಹೇಳಿದ್ದರು. 

ಇಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಸೋನು ನಿಗಮ್‌ ಹೇಳಿದ್ದು ಇಷ್ಟು : ನಾನು ಅಝಾನ್‌ ವಿರುದ್ಧವಾಗಲೀ ಇಸ್ಲಾಂ ವಿರುದ್ಧವಾಗಲಿ ಪ್ರಶ್ನೆ ಎತ್ತಿಲ್ಲ. ನಾನು ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿ, ಮಂದಿರ, ಗುರುದ್ವಾರಗಳಲ್ಲಿ ಲೌಡ್‌ಸ್ಪೀಕರ್‌ ಬಳಸುವುದನ್ನು ಮಾತ್ರವೇ ನಾನು ಪ್ರಶ್ನಿಸಿದ್ದೇನೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next