“ಇದು 27 ನಿಮಿಷದ ಕಿರುಚಿತ್ರ. ನನ್ನ ಕನಸಿಗೆ ಬಣ್ಣ ತುಂಬಿದ್ದು ನಾಯಕ ವಿವೇಕ್ ಸಿಂಹ. ನಾನು ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಎಲ್ಲೋ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವನು ಆ ಕೆಲಸ ಬಿಟ್ಟು ಬಂದೆ. ನನ್ನ ಮುಂದೆ ಸಿನಿಮಾ ಕಾಣುತ್ತಿತ್ತು. ಒಂದು ಚಿತ್ರ ಮಾಡಬೇಕು ಎಂಬ ಆಸೆ ಚಿಗುರಿತು. ಒಮ್ಮೆ ವಿವೇಕ್ ಸಿಂಹ ಅವರನ್ನು ರಿಯಾಲಿಟಿ ಶೋ ಒಂದರಲ್ಲಿ ಭೇಟಿಯಾದೆ. ಆಗಲೇ ನನಗೆ, ಕಥೆ ಬರೆಯಬೇಕು ಎಂಬ ಯೋಚನೆ ಬಂತು. ಹಾಗೊಂದು ಕಥೆ ಮಾಡಿಕೊಂಡು ವಿವೇಕ್ ಬಳಿ ಹೋದೆ. ಹಿಂದೆ ಮುಂದೆ ನೋಡದೆ, ಒಪ್ಪಿ ಪ್ರೋತ್ಸಾಹಿಸಿದ್ದಕ್ಕೆ “ವಿದಾತೃ’ ಕಿರುಚಿತ್ರವಾಗಿದೆ’ ಎಂದು ವಿವರ ಕೊಟ್ಟರು ಸಂತು. “ಇದು ಅಪ್ಪ-ಮಗನ ಸಂಬಂಧವಿರುವ ಚಿತ್ರ. ಮಗನಿಗೆ ನಿರ್ದೇಶಕನಾಗುವ ಆಸೆ. ಆದರೆ, ಅದು ಸಾಧ್ಯವಾಗಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಸ್ಥಿತಿ ಇರಲ್ಲ. ಆದರೂ, ಅವನಿಗೆ ನಿರ್ದೇಶಕ ಆಗುವ ಕನಸು. ಅಪ್ಪನ ಅನಾರೋಗ್ಯ ಒಂದು ಕಡೆ, ಕೆಲಸವಿಲ್ಲದೆ ಅಲೆದದಾಡುವ ಮಗ ಇನ್ನೊಂದು ಕಡೆ, ಓದುವ ತಂಗಿ ಮತ್ತೂಂದು ಕಡೆ. ಸದಾ ಯಾವುದಾದರೊಂದು ಕೆಲಸ ಮಾಡೋ ಎಂದು ಹೇಳುವ ಅಮ್ಮ ಮಗದೊಂದು ಕಡೆ. ಇವಿಷ್ಟು ಅಂಶ ಇಟ್ಟುಕೊಂಡು ಕಥೆ ಬರೆದು ಮಾಡಿದ ಚಿತ್ರವಿದು. ಎಲ್ಲರ ಸಹಕಾರ ಇದ್ದುದರಿಂದಲೇ “ವಿದಾತ್ರು’ ನಿಮ್ಮ ಮುಂದೆ ಬರಲು ಸಾಧ್ಯವಾಯ್ತು’ ಅಂದರು ನಿರ್ದೇಶಕ ಸಂತು.
Advertisement
ವಿವೇಕ್ ಸಿಂಹ ಅವರಿಗೆ ಎಲ್ಲರ ಪ್ರೋತ್ಸಾಹದಿಂದ ಇಂಥದ್ದೊಂದು ಕಿರುಚಿತ್ರ ಮಾಡಲು ಸಾಧ್ಯವಾಯ್ತಂತೆ. ಯಾವುದೇ ಸಿನಿಮಾಗೆ ಕಡಿಮೆ ಇಲ್ಲದಂತೆ, “ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಬೇಕು ಅಂತ ಹೊರಟಾಗ, ಮಧ್ಯೆ ಒಂದು ಕಡೆ ಹಣದ ಸಮಸ್ಯೆ ಎದುರಾಯ್ತು. ಕೊನೆಗೆ, ನವೀನ್ ಎಂಬುವವರು ಸಾಥ್ ನೀಡಿ ಪ್ರೋತ್ಸಾಹಿಸಿದರು. ಈ ಚಿತ್ರಕ್ಕೆ ರಾಘವೇಂದ್ರ, ಮಧು, ಗೌತಮ್, ಗೋವಿಂದ್, ಹೃಷಿಕೇಶ್, ರಕ್ಷಿತ್, ಸುನೀಲ್ ಕುಲಕರ್ಣಿ,ನಿಸರ್ಗ ಎಲ್ಲರ ಶ್ರಮ ಚಿತ್ರಕ್ಕಿದೆ’ ಎಂದರು ವಿವೇಕ್.