Advertisement

ಸೋನಿಯಾ ನನ್ನನ್ನು ಪ್ರಧಾನಿ ಮಾಡಲ್ಲ: ಪ್ರಣವ್‌ ಮುಖರ್ಜಿ

12:20 AM Dec 06, 2023 | Team Udayavani |

ಹೊಸದಿಲ್ಲಿ: “ಇಲ್ಲ. ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡುವುದಿಲ್ಲ”, ಇದು 2004ರಲ್ಲಿ ಪ್ರಧಾನಿ ಆಗುವ ಅವಕಾಶದ ಕುರಿತು ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರ ಪ್ರಶ್ನೆಗೆ ಪ್ರಣವ್‌ ಮುಖರ್ಜಿ ಅವರ ಪ್ರತಿಕ್ರಿಯೆ ಆಗಿತ್ತು. 2004ರಲ್ಲಿ ಪ್ರಣವ್‌ ಮುಖರ್ಜಿ ಅವರು ಪ್ರಧಾನಿ ರೇಸ್‌ನಲ್ಲಿದ್ದರು.

Advertisement

ಈ ಸಂದರ್ಭದಲ್ಲಿನ ಘಟನೆ ಕುರಿತು ತಮ್ಮ ಪುಸ್ತಕ “ಇನ್‌ ಪ್ರಣವ್‌, ಮೈ ಫಾದರ್‌: ಎ ಡಾಟರ್‌ ರಿಮೆಂಬರ್’ನಲ್ಲಿ ಶರ್ಮಿಷ್ಠಾ ಮುಖರ್ಜಿ ಮೆಲುಕು ಹಾಕಿದ್ದಾರೆ. ತನ್ನ ತಂದೆ ಪ್ರಣವ್‌ ಅವರನ್ನು ಬಿಟ್ಟು ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿದ್ದ ಬಗ್ಗೆ ಸೋನಿಯಾ ಗಾಂಧಿ ವಿರುದ್ಧ ತಮಗೆ ಯಾವುದೇ ಹಗೆತನ ಇಲ್ಲ. ಅಲ್ಲದೇ ಮನಮೋಹನ್‌ ಸಿಂಗ್‌ ಅವರ ಬಗ್ಗೆಯೂ ತಮಗೆ ಯಾವುದೇ ತಕರಾರಿಲ್ಲ ಎಂದು ಪುಸ್ತಕದಲ್ಲಿ ಶರ್ಮಿಷ್ಠಾ ಹೇಳಿದ್ದಾರೆ. ಇದೇ ವೇಳೆ ಅಂದಿನ ರಾಜಕೀಯ ಸನ್ನಿವೇಶ, ಪಕ್ಷದಲ್ಲಿ ನೆಹರೂ-ಗಾಂಧಿ ಕುಟುಂಬದ ಹಿಡಿತ, ರಾಹುಲ್‌ ಗಾಂಧಿ ಅವರಿಗೆ ವರ್ಚಸ್ಸಿನ ಕೊರತೆ, ಹೀಗೆ ಅನೇಕ ಸಂಗತಿಗಳ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾವವಾಗಿದೆ ಎಂದು ರೂಪಾ ಪಬ್ಲಿಕೇಶನ್ಸ್‌ ತಿಳಿಸಿದೆ. ಕೇಂದ್ರ ಹಣಕಾಸು, ವಿದೇಶಾಂಗ ಹಾಗೂ ರಕ್ಷಣ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ, 2012ರಿಂದ 2017ರ ವರೆಗೆ ರಾಷ್ಟ್ರಪತಿ ಆಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next