Advertisement

ಬಿಜೆಪಿ ಎದುರಿಸಲು ಸೋನಿಯಾ, ರಾಹುಲ್‌ ಗಾಂಧಿ ಸೂಕ್ತ: ಖರ್ಗೆ

11:15 PM Oct 09, 2019 | Team Udayavani |

ಕಲಬುರಗಿ: ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿರೋಧಿಗಳು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯೇ ಸೂಕ್ತ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, “ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನನಗೆ ಹುದ್ದೆ ಬೇಕು, ಸಚಿವ ಸ್ಥಾನ ಬೇಕು ಎನ್ನುತ್ತಿದ್ದರು. ಈಗ ಪಕ್ಷ ಅಧಿಕಾರದಲ್ಲಿ ಇಲ್ಲವೆಂದು ಏನೇನೋ ಹೇಳು ತ್ತಿದ್ದಾರೆ. ಬ್ಲ್ಯಾಕ್‌ಮೇಲ್‌ ತಂತ್ರಕ್ಕೂ ಯತ್ನಿಸುತ್ತಿದ್ದಾರೆ. ನನ್ನ ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಇಂಥದ್ದನ್ನು ಬಹಳ ಕಂಡಿದ್ದೇನೆ.

ಸೋನಿಯಾ ಗಾಂಧಿಗೆ ಪ್ರಧಾನಿಯಾಗುವ ಅವಕಾಶ ಇತ್ತು. ಆದರೂ, ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದರು. ಎರಡೂ ಅವಧಿಗೆ ಡಾ. ಸಿಂಗ್‌ ಪ್ರಧಾನಿಯಾದರು. ಈಗಲೂ ಸೋನಿಯಾ ಗಾಂಧಿ ಪಕ್ಷ ಸಂಘ ಟನೆಗೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ರಾಹುಲ್‌ ಗಾಂಧಿ ಬೆಂಬಲವಾಗಿ ನಿಲ್ಲುತ್ತಾರೆ’ ಎಂದರು.

ಬಿಜೆಪಿಯಲ್ಲಿ ಧ್ವನಿ ಎತ್ತಿದರೆ ನೋಟಿಸ್‌: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡುವ ಧೈರ್ಯ ಕೂಡ ರಾಜ್ಯ ಬಿಜೆಪಿಯ ಯಾವ ನಾಯಕರ ಬಳಿಯೂ ಇಲ್ಲ. ಬಿಜೆಪಿ ಶಾಸಕರು ಧ್ವನಿ ಎತ್ತಿದರೆ ಶೋಕಾಸ್‌ ನೋಟಿಸ್‌ ಬರುತ್ತದೆ ಎಂದರು.

ಕಾಂಗ್ರೆಸ್‌ ದೊಡ್ಡ ಸಮುದ್ರ. ಎಲ್ಲ ನದಿಗಳು ಅದರಲ್ಲಿ ಬಂದು ಸೇರುತ್ತವೆ. ಪಕ್ಷ ಸೇರಿದ ಮೇಲೆ ಎಲ್ಲರೂ ಕೂಡ ಕಾಂಗ್ರೆಸ್‌ನವರೇ. ಇಲ್ಲಿ ಮೂಲ, ವಲಸಿಗ ಎಂಬ ಭೇದ ಇಲ್ಲ. ಪಕ್ಷದ ಒಳಗಡೆ ಇರುವ ಮುನಿಸುಗಳ ಬಗ್ಗೆ ಮಾತಾಡಿಕೊಳ್ಳಬೇಕು. ಆದರೆ, ಅದನ್ನು ಬಹಿರಂಗ ಪಡಿಸಬಾರದು.
-ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next