Advertisement

71ನೇ ವರ್ಷಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ

07:10 AM Dec 10, 2017 | Harsha Rao |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ 71ನೇ ವರ್ಷಕ್ಕೆ ಕಾಲಿರಿಸಿದರು. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಬರೋಬ್ಬರಿ 19 ವರ್ಷಗಳ ಕಾಲ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿರುವ ಅವರು ಡಿ.15ರಂದು ಪುತ್ರ ರಾಹುಲ್‌ ಗಾಂಧಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಪಕ್ಷದ ಅಧಿನಾಯಕಿಗೆ ಶುಭಾಷಯ ಕೋರಲು “ನಂ.10 ಜನಪಥ್‌’ಗೆ ಕಾರ್ಯಕರ್ತರು ಆಗಮಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್‌ ಸೋನಿಯಾರಿಗೆ ಶುಭ ಕೋರಿದರು. ಮಾಜಿ ಸಿಎಂ ಹರೀಶ್‌ ರಾವತ್‌ ಸೋನಿಯಾ ನಿವಾಸದೆದುರು ಡ್ರಮ್‌ ಬಾರಿಸಲು ಮುಂದಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next