Advertisement

ಕೋವಿಡ್ 19 : ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸೋನಿಯಾ ಸಭೆ

10:50 AM Apr 10, 2021 | Team Udayavani |

ನವ ದೆಹಲಿ :  ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ತಮ್ಮ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅರಿತುಕೊಳ್ಳಲು  ಇಂದು(ಏ.10) ವೀಡಿಯೊ ಸಂವಾದವನ್ನು ಆಯೋಜಿಸಿದೆ.

Advertisement

ವೀಡಿಯೊ ಸಂವಾದದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದು, ಅಲ್ಲಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂಬುವುದನ್ನು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಈ ನಡುವೆ ಮಹಾರಾಷ್ಟ್ರ, ಒಡಿಶಾ, ಆಂದ್ರ ಪ್ರದೆಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಉತ್ತರಖಂಡ್ ಹಾಗೂ ಬಿಹಾರ್ ಸೇರಿ ಕೆಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆಯ ಕೊರತೆ ಕಂಡುಬಂದಿದೆ.

ಓದಿ : ಹೋ ಮಿಯೋಪತಿ : ಸುರಕ್ಷಿತ, ಪರಿಣಾಮಕಾರಿ ಪರ್ಯಾಯ ವೈದ್ಯಕೀಯ ಪದ್ಧತಿ

ದೇಶದಲ್ಲಿ ಕೋವಿಡ್ ಲಸಿಕೆಯ ಕೊರತೆ ಇರುವಾಗ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸುತ್ತಿರುವುದು ಪ್ರಚಾರ ಗಳಿಸಿಕೊಳ್ಳುವ ಪ್ರಯತ್ನವೇ..? ಎಂದು ರಾಹುಲ್ ಗಾಂಧಿ ಮೋದಿಯವರನ್ನು ಟೀಕೆ ಮಾಡಿದ್ದಾರೆ.

Advertisement

ಇನ್ನು, ನಿನ್ನೆ ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ಕೋವಿಡ್ ಸೋಂಕಿನ ಕೊರತೆ ಇದೆ. ಕೋವಿಡ್ ಲಸಿಕೆಯ ಕೊರತೆ ದೇಶದ ಒಂದು ಗಂಭೀರ ಸಮಸ್ಯೆ. ಅದು ಉತ್ಸವ ಅಲ್ಲ ಎಂದು ಕೋವಿಡ್ ಸೋಂಕಿನ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದವನ್ನು ನಡೆಸಿ ಏಪ್ರಿಲ್ 11 ಹಾಗೂ 14 ರ ನಡುವೆ ದೇಶವ್ಯಾಪಿ ಲಸಿಕೆ ಉತ್ಸವವನ್ನು ಆಚರಿಸಲು ಕರೆ ನೀಡಿರುವುದಕ್ಕೆ ಪ್ರತಿಯಾಗಿ ಆಕ್ರೋಶ ವ್ಯಕ್ತ ಪಡಿಸಿದ್ದರು.

ಈ ಸಂಬಂಧ ರಾಹುಲ್ ಗಾಂಧಿ, ಮೋದಿ ಅವರಿಗೆ ಪತ್ರ ಬರೆದಿದ್ದು, ಲಸಿಕೆಗಳ ರಫ್ತು, ಇತರ ಲಸಿಕೆಗಳಿಗೆ ತ್ವರಿತ ಅನುಮೋದನೆ ಮತ್ತು ಅಗತ್ಯವಿರುವ ಎಲ್ಲರಿಗೂ ಲಸಿಕೆ ಒದಗಿಸುವಂತೆ ಕೋರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ

ನಮ್ಮ ರಾಷ್ಟ್ರವು ಲಸಿಕೆ ಸಮಸ್ಯೆಯನ್ನು ಎದುರಿಸುತ್ತಿರುವಾಗ, 6 ಕೋಟಿಗಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ರಫ್ತು ಮಾಡಲಾಗಿದೆ … ಲಸಿಕೆಗಳ ರಫ್ತು ಕೂಡ ಪ್ರಚಾರವನ್ನು ಗಳಿಸುವ ಪ್ರಯತ್ನವಾಗಿದೆಯೇ ? ವಿನಾಶಕಾರಿ ಕೋವಿಡ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಹಲವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದುರ್ಬಲ ವರ್ಗಗಳಿಗೆ ನೇರ ಆದಾಯದ ಬೆಂಬಲವನ್ನು ಒದಗಿಸಿ “ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಇನ್ನು, ಈ ಸಂದರ್ಭದಲ್ಲಿ, ನಾವು 3 ತಿಂಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕುವಲ್ಲಿ ವಿಫಲರಾಗಿದ್ದೇವೆ “ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಓದಿ : ಬಹುಭಾಷಾ ನಟಿ ನೇಹಾ ಶರ್ಮಾ ಹಾಟ್ ಫೋಟೋ ಗ್ಯಾಲರಿ

Advertisement

Udayavani is now on Telegram. Click here to join our channel and stay updated with the latest news.

Next