Advertisement

ಹಠಾತ್‌ ಅನಾರೋಗ್ಯ: ಸೋನಿಯಾ ಶಿಮ್ಲಾದಿಂದ ದಿಲ್ಲಿಗೆ ವಾಪಸ್‌

11:39 AM Mar 23, 2018 | Team Udayavani |

ಶಿಮ್ಲಾ : ಇಲ್ಲಿಂದ 15 ಕಿ.ಮೀ. ದೂರದಲ್ಲಿರುವ  ಛರಾಬ್ರಾ ಎಂಬಲ್ಲಿ  ನಿರ್ಮಾಣ ಹಂತದಲ್ಲಿರುವ ತನ್ನ ಮನೆಯನ್ನು ನೋಡಲು ಬಂದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿನ್ನೆ ಮಧ್ಯರಾತ್ರಿ ತೀವ್ರ ಬಸವಳಿಕೆಯನ್ನು ಅನುಭವಿಸಿದ ಕಾರಣಕ್ಕೆ ಆಕೆಯನ್ನು ದಿಲ್ಲಿಗೆ ಕರೆದೊಯ್ಯಲಾಯಿತು. 

Advertisement

ಸೋನಿಯಾ ಅವರು ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಲ್ಲಿಗೆ ಬಂದಿದ್ದರು.

ಸೋನಿಯಾ ಜತೆಗಿದ್ದ ವೈದ್ಯರಿಂದ ತನಗೆ ಅಂಬುಲೆನ್ಸ್‌ ವ್ಯವಸ್ಥೆಮಾಡುವಂತೆ ಟೆಲಿಫೋನ್‌ ಕರೆ ಬಂದಿತ್ತು ಎಂದು ಇಂದಿರಾ ಗಾಂಧಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಹಿರಿಯ ಮೆಡಿಕಲ್‌ ಸುಪರಿಂಟೆಂಡೆಂಟ್‌ ಡಾ. ರಮೇಶ್‌ ಚಾಂದ್‌ ತಿಳಿಸಿದರು. 

ಆದರೆ ಸೋನಿಯಾ ಅಂಬುಲೆನ್ಸ್‌ ಕಾಯದೆ ತನ್ನ ಸ್ವಂತ ಕಾರಿನಲ್ಲೇ ತೆರಳಿದರು. ಅವರಿಗಾಗಿ ಬಂದಿದ್ದ ಅಂಬುಲೆನ್ಸ್‌ನಲ್ಲಿ ಅದರೊಂದಿಗೆ ಬಂದಿದ್ದ ವೈದ್ಯರರು ದಿಲ್ಲಿಗೆ ಮರಳಿದರು. ದಿಲ್ಲಿಗೆ ಹೋಗುವ ಮಾರ್ಗದಲ್ಲಿ ಸೋನಿಯಾ ಪಂಚಕುಲದಲ್ಲಿ ಸ್ವಲ್ಪಹೊತ್ತು ವಿಶ್ರಮಿಸಿದರು ಎಂದು ಡಾ. ಚಾಂದ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next