Advertisement

ವಿದ್ಯಾರ್ಥಿಗಳ ಮುಂದೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ಸೀತಾರಾಮನ್

09:54 AM Dec 18, 2019 | Mithun PG |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಯುದ್ಧ ಘೋಷಿಸಿದೆ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ರಾಜಕೀಯ ಲಾಭಕ್ಕಾಗಿ ಸೋನಿಯಾ ಗಾಂಧಿ ವಿದ್ಯಾರ್ಥಿಗಳ ಮೂಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದಿದ್ದಾರೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ, ಕೋಮು ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮೂಲಕ ಬಿಜೆಪಿ ಸರ್ಕಾರ ಜನರ ಗಮನವನ್ನು ತನ್ನ ವೈಫಲ್ಯಗಳಿಂದ ಬೇರೆಡೆಗೆ ತಿರುಗಿಸುತ್ತಿದೆ ಮಾತ್ರವಲ್ಲದೆ ಯುವಜನಾಂಗವನ್ನು ಮತ್ತು ವಿದ್ಯಾರ್ಥಿಗಳನ್ನು ನಿಗ್ರಹಿಸುವ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರದ ಅಂತ್ಯ ಆರಂಭವಾಗಿದೆ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್, ಸೋನಿಯಾ ಗಾಂಧಿ ಹೇಳಿಕೆ ಬೇಜವಾಬ್ದಾರಿಯಿಂದ ಮತ್ತು ರಾಜಕೀಯ ಲಾಭದ ಉದ್ದೇಶವನ್ನು ಹೊಂದಿದೆ. ಅವರ ಮಾತು ದೇಶಾದ್ಯಂತ ಅಶಾಂತಿಯನ್ನು ಹರಡುತ್ತದೆ. ಪ್ರತಿಪಕ್ಷದ ಸ್ಥಾನದಲ್ಲಿದ್ದುಕೊಂಡು ಶಾಂತಿ ಮತ್ತು ಸೌಹಾರ್ಧವನ್ನು ಕಾಪಾಡಲು ಅವರು ಮುಂದಾಗಬೇಕಿತ್ತು. ಆದರೇ ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉಭಯ ಸದನಗಳು ಕೂಡ ಅಂಗಿಕರಿಸಿವೆ ಎಂಬುದನ್ನು ಮೊದಲು ಕಾಂಗ್ರೆಸ್ ನೆನಪಿನಲ್ಲಿಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next