Advertisement

ಸೋನಿಯಾಗೆ ಅಧಿಕಾರ ಕೊಡಿ; ಸೆ. 20ರ ಒಳಗೆ ನಿರ್ಣಯ ಕೈಗೊಳ್ಳಲು ಪಿಸಿಸಿಗಳಿಗೆ ಸೂಚನೆ?

11:45 AM Sep 15, 2022 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವಂತೆಯೇ ಮಹತ್ವದ ವಿದ್ಯಮಾನವೊಂದು ನಡೆದಿದೆ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರೇ ವಿವಿಧ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಅಧ್ಯಕ್ಷರನ್ನು ಆರಿಸಲಿದ್ದಾರೆ ಎಂಬ ಬಗ್ಗೆ ಸೆ. 20ರ ಒಳಗಾಗಿ ನಿರ್ಧರಿಸಿ, ಅಭಿಪ್ರಾಯವನ್ನು ವರಿಷ್ಠರಿಗೆ ಕಳುಹಿಸಬೇಕು ಎಂಬ ಸೂಚನೆಯನ್ನು ರವಾನಿಸಲಾಗಿದೆ.

Advertisement

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಪಾರದರ್ಶಕ ವಾಗಿ ನಡೆಯುತ್ತಿಲ್ಲ ಎಂದು ಹಿರಿಯ ಮುಖಂಡರಾದ ಕಾರ್ತಿ ಚಿದಂಬರಂ, ಮನೀಶ್‌ ತಿವಾರಿ, ಶಶಿ ತರೂರ್‌ ಅವರು ಕೆಲವು ದಿನಗಳ ಹಿಂದೆ ಬಹಿರಂಗವಾಗಿಯೇ ಆಕ್ಷೇಪ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಈ ತಿಂಗಳ 20ರ ಒಳಗಾಗಿ ನಿರ್ಣಯವನ್ನು ಅಂಗೀಕರಿಸಿ ಕಳುಹಿಸಬೇಕಾಗಿದೆ. ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಸೆ. 22ರಿಂದ ಶುರುವಾಗಲಿದೆ. ನಾಮಪತ್ರಗಳನ್ನು ಸೆ. 24ರಿಂದ 30ರ ನಡುವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಅ. 17ರಂದು ನಡೆಯಲಿದೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿಯವರೇ ಸ್ಪರ್ಧಿಸಬೇಕು ಎಂಬ ಬೇಡಿಕೆಯನ್ನು ಕೆಲವು ಮುಖಂಡರು ಈಗಾಗಲೇ ಮಂಡಿಸಿದ್ದಾರೆ. ಸದ್ಯ ಭಾರತ್‌ ಜೋಡೋ ಯಾತ್ರೆಯಲ್ಲಿ ಇರುವ ರಾಹುಲ್‌ ಗಾಂಧಿ ಮಾತ್ರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೂಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅವರೇ ಒಂದು ಹಂತದಲ್ಲಿ ಈ ಅಂಶವನ್ನು ನಿರಾಕರಿಸಿದ್ದಾರೆ.

ಸಂಬಂಧವಿಲ್ಲ?: ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖಂಡರಿಗೆ ಅಧ್ಯಕ್ಷರನ್ನು ಆಯ್ಕೆಯ ಸ್ವಾತಂತ್ರ್ಯವನ್ನು ಸೋನಿಯಾ ಅವರಿಗೇ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಇದರಿಂದ ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ಉಸ್ತುವಾರಿ ಹೊತ್ತಿರುವ ಸಂಸದ ಮಧುಸೂದನ ಮಿಸ್ತ್ರಿ ನೇತೃತ್ವದ ಸಮಿತಿಯ ಮೇಲೆ ಯಾವುದೇ ಪ್ರಭಾವ ಬೀರಲಾರದು ಎಂದು ಕೆಲವರು ನಾಯಕರು ವಾದಿಸಿದ್ದಾರೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ “ಎನ್‌ಡಿಟಿವಿ’ ವರದಿ ಮಾಡಿದೆ.

Advertisement

ಹಂಗಾಮಿ ಅಧ್ಯಕ್ಷೆ: 2019ರ ಲೋಕಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿಯೇ ಮುಂದುವರಿದಿದ್ದಾರೆ. ಈ ಅವಧಿಯಲ್ಲಿ ಕಾಂಗ್ರೆಸ್‌ನ ಭಿನ್ನಮತೀಯ ನಾಯಕರ ಗುಂಪು ಜಿ-23 ಪಕ್ಷದ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಸುಧಾರಣೆ ಯಾಗಬೇಕು ಎಂದು ಒತ್ತಾಯಿಸುತ್ತಾ ಬಂದಿದೆ. ಈ ಪೈಕಿ ಕೆಲವರು ಪಕ್ಷವನ್ನು ತ್ಯಜಿಸಿದ್ದಾರೆ.

ಸಹಮತ ಇರಲಿ: ಇದೇ ವೇಳೆ, ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಸಹಮತದ ಅಭ್ಯರ್ಥಿಯೇ ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯ ವರು ಪಕ್ಷದಲ್ಲಿ ಪ್ರಧಾನವಾಗಿ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ. ರಾಹುಲ್‌ ಅವರು ಪಕ್ಷದ ತಾತ್ವಿಕ ಮುಖವಾಗಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next