Advertisement

ಭಾರತೀಯ ಸೈನಿಕರಿಗಾಗಿ ‘ಸೋಲಾರ್ ಟೆಂಟ್’…ಇನ್ಮುಂದೆ ಚಳಿಯಲ್ಲೂ ಬೆಚ್ಚಗಿರಬಹುದು ಯೋಧರು

09:34 PM Feb 20, 2021 | Team Udayavani |

ಲಡಾಖ್ : ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ಭಾರತೀಯ ಸೈನಿಕರಿಗಾಗಿ ಸೋಲಾರ್ ಟೆಂಟ್ ಅಭಿವೃದ್ಧಿ ಪಡಿಸಿದ್ದಾರೆ.

Advertisement

ಹಲವು ಹೊಸತನಗಳಿಗೆ ನಾಂದಿ ಹಾಡಿರುವ ಎಂಜನಿಯರ್ ಹಾಗೂ ಶಿಕ್ಷಣದ ಸುಧಾರಕ ವಾಂಗ್ಚುಕ್, ಭಾರತೀಯ ಯೋಧರಿಗಾಗಿ ಈ ನೂತನ ಆವಿಷ್ಕಾರ ಮಾಡಿದ್ದಾರೆ. ಲಡಾಖ್ ನ ‘ಗುಲ್ವಾನಾ’ದಂತಹ ಅತೀ ಶೀತ ಪ್ರದೇಶದಲ್ಲಿ ಈ ಸೋಲಾರ್ ಟೆಂಟ್ ಉಪಯೋಗಕಾರಿಯಾಗಲಿದೆ.

ಇಂದು ತಮ್ಮ ಟ್ವಿಟರ್ ಮೂಲಕ ಸೋಲಾರ್ ಟೆಂಟ್ ಪರಿಚಯಿಸಿರುವ ವಾಂಗ್ಚುಕ್, ಅತ್ಯಂತ ಶೀತ ಪ್ರದೇಶದಲ್ಲಿ ನಮ್ಮ ಸೈನಿಕರು ಟೆಂಟ್ ಹಾಕುತ್ತಿದ್ದರು. ತಾವು ಬೆಚ್ಚಗೆ ಇರಲು ಸೀಮೆ ಎಣ್ಣೆ ಬಳಸಿ ಬೆಂಕಿ ಹಾಕುತ್ತಿದ್ದರು. ಕೆಲವೊಂದು ಸಾರಿ ಇದು ಸಹಾಯಕ್ಕೆ ಬರುತ್ತಿರಲಿಲ್ಲ. ಸೈನಿಕರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಈ ಸೋಲಾರ್ ಟೆಂಟ್ ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ.

Advertisement

ಈ ಸೋಲಾರ್ ಟೆಂಟ್ ಕೇವಲ 30 ಕೆ.ಜಿ ಇದೆ. ಇದನ್ನು ಸುಲಭವಾಗಿ ಬೇರೆ ಸ್ಥಳಗಳಿಗೆ ತೆಗೆದುಕೊಂಡು ಹೋಗಬಹುದು. ಹೊರಗಡೆ ತಾಪಮಾನ-14 ಡಿಗ್ರಿ ಸೆಲ್ಸಿಯಸ್ ಇದ್ದರೆ ಟೆಂಟ್ ಒಳಗೆ + 15 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಇದರಿಂದ ಸೈನಿಕರು ಬೆಚ್ಚನೆ ಇರಬಹುದು ಎಂದು ವಾಂಗ್ಚುಕ್ ಹೇಳಿದ್ದಾರೆ.

ಭಾರತೀಯ ಸೈನಿಕರಿಗಾಗಿ ಸೋಲಾರ್ ಟೆಂಟ್ ಸಿದ್ಧಪಡಿಸಿರುವ ವಾಂಗ್ಚುಕ್ ಅವರಿಗೆ ಉದ್ಯಮಿ ಆನಂದ್ ಮಹೇಂದ್ರ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದರೆ ಬಾಲಿವುಡ್ ನಲ್ಲಿ ತೆರೆ ಕಂಡಿದ್ದ 3 ಈಡಿಯಟ್ಸ್ ಚಿತ್ರದ ಫುನ್ಸುಖ್ ವಾಂಗ್ಡು ಪಾತ್ರಕ್ಕೆ ಪ್ರೇರಣೆಯಾಗಿದ್ದೆ ಸೋನಮ್ ವಾಂಗ್ಚುಕ್. ಈ ಸಿನಿಮಾದಲ್ಲಿ ಆಮೀರ್ ಖಾನ್ ಫುನ್ಸುಖ್ ವಾಂಗ್ಡು ಪಾತ್ರ ನಿಭಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next