Advertisement

“ಹೆಡ್‌ ಬುಷ್‌’ಸಿನಿಮಾದ ವಿರುದ್ದ ಮಾಜಿ ಡಾನ್ ಜಯರಾಜ್‌ ಪುತ್ರ ಗರಂ

07:41 AM May 06, 2022 | Team Udayavani |

ಬೆಂಗಳೂರು: ನಟ ಡಾಲಿ ಧನಂಜಯ್‌ ಅಭಿನಯಿಸುತ್ತಿರುವ “ಹೆಡ್‌ ಬುಷ್‌’ ಸಿನಿಮಾದ ವಿರುದ್ದ ಮಾಜಿ ಭೂಗತ ಪಾತಕಿ ಎಂ.ಪಿ ಜಯರಾಜ್‌ ಪುತ್ರ ಮತ್ತು ನಟ ಅಜಿತ್‌ ಜಯರಾಜ್‌ ಗರಂ ಆಗಿದ್ದಾರೆ.

Advertisement

“ಹೆಡ್‌ ಬುಷ್‌’ ಸಿನಿಮಾ ಎಂ.ಪಿ ಜಯರಾಜ್‌ ಜೀವನ ಚರಿತ್ರೆ ಆಧಾರಿತ ಎಂದು ಹೇಳಲಾಗುತ್ತಿದ್ದು, ಸಿನಿಮಾದಲ್ಲಿ ನಟ ಡಾಲಿ ಧನಂಜಯ್‌, ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಫೋಸ್ಟರ್‌ ಒಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಪೋಸ್ಟರ್‌ ನಲ್ಲಿ “ಮೊದಲ ಭೂಗತ ದೊರೆ’ ಎಂಬ ಬರಹವನ್ನು ಪ್ರಕಟಿಸಲಾಗಿತ್ತು.

ಹೀಗಾಗಿ ತಮ್ಮ ತಂದೆಯ ಕಥೆಯನ್ನು ತೆರೆ ಮೇಲೆ ತರಲು ಹೊರಟಿರುವ ಚಿತ್ರತಂಡದ ವಿರುದ್ಧ ಕಿಡಿಕಾರಿರುವ ಅಜಿತ್‌ ಜಯರಾಜ್‌, ನಮ್ಮ ತಂದೆಯ ಕಥೆಯನ್ನಿ ಟ್ಟುಕೊಂಡು ಯಾರೂ ಸಿನಿಮಾ ಮಾಡಬಾರದು.ಇದಕ್ಕಾಗಿ ಯಾವುದೇ ರೀತಿಯಲ್ಲೂ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವ ಅಜಿತ್‌ ಜಯರಾಜ್‌, “ನಮ್ಮ ತಂದೆಯ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರೆಂದು ತಿಳಿದು ಬಂದಿದೆ. ಇದರಿಂದ ನನ್ನ ವೈಯಕ್ತಿಕ ಬದುಕಿಗೆ ತೊಂದರೆಯಾಗಿದೆ. ಸಿನಿಮಾ ಶೂಟಿಂಗ್‌ ಆರಂಭ ಆಗುವುದಕ್ಕೂ ಮುನ್ನ ಸಿನಿಮಾ ತಂಡದೊಂದಿಗೆ ಮಾತಾಡಿದ್ದರೂ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಫಿಲಂ ಚೇಂಬರ್‌ಗೆ ದೂರನ್ನು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next