Advertisement

ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೆ ಕೋವಿಡ್ ಸೋಂಕು ದೃಢ

05:28 PM Aug 04, 2020 | keerthan |

ವಿಜಯಪುರ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಓರ್ವ ಪುತ್ರನಿಗೆ ಕೋವಿಡ್ -19 ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ.

Advertisement

ವಿಜಯಪುರ ‌ನಗರದಲ್ಲಿ ನೆಲೆಸಿರುವ ಡಿಸಿಎಂ‌ ಗೋವಿಂದ ಕಾರಜೋಳ ಅವರ ಮಗನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳಿದ್ದ ಡಿಸಿಎಂ ಪುತ್ರನಿಗೆ ಸೋಂಕು ಹರಿಡಿರುವ ಶಂಕೆ ವ್ಯಕ್ತವಾಗಿದೆ.

ಕೆಮ್ಮು, ಶೀತ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿದೆ. ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಆದರೆ ಕಾರಜೋಳ ಅವರ ಸೋಂಕಿತ ಪುತ್ರನ ಕುಟುಂಬದ ಇತರೆ ಸದಸ್ಯರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next