ರಾಜ್‌ಕೋಟ್ : ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಿಂದ ಕೆಳಗೆ ದೂಡಿ ಕೊಲೆ ಮಾಡಿರುವ ಪ್ರಕರಣವೊಂದು ಸಿಸಿಟಿವಿ ಚಿತ್ರಿಕೆ ಮೂಲಕ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾಯಿಯನ್ನು ಟೆರೇಸ್‌ನಿಂದ ಕೆಳದೂಡಿ ಆಕೆಯನ್ನು ಕೊಂದ ಮಗನು ತನಗೆ ಈ ವಿಷಯವೇ ಗೊತ್ತಿಲ್ಲದಂತೆ ನಟಿಸಿದ್ದ. ಆದರೆ ಸಿಸಿಟಿವಿಯಲ್ಲಿ ಆತ ತನ್ನ ತಾಯಿಯನ್ನು ಟೆರೇಸ್‌ಗೆ ಎಳೆದೊಯ್ದು ಅಲ್ಲಿಂದ ಕೆಳಗೆ ದೂಡುವ ದೃಶ್ಯ ದಾಖಲಾಗಿದ್ದು ಇದುವೇ ಆತ ಎಸಗಿದ ಅಮಾನುಷ ಕೊಲೆ ಕೃತ್ಯವನ್ನು ಸಾಬೀತುಗೊಳಿಸಿದೆ.
ತಾಯಿ ಜಯಶ್ರೀ ಬೆನ್‌ಳನ್ನು ಟೆರೇಸ್‌ನಿಂದ ಕೆಳದೂಡಿ ಸಾಯಿಸಿದ ಮಗ ಸಂದೀಪ್, ತನ್ನ ತಾಯಿ ಟೆರೇಸ್‌ನಿಂದ ಆಕಸ್ಮಿಕವಾಗಿ ಬಿದ್ದು ಸತ್ತಳು ಎಂದು ಸಂದೀಪ್ ಹೇಳಿಕೊಂಡಿದ್ದ. ಆತನ ತಾಯಿ ಟೆರೇಸ್ ಮೇಲಿಂದ ಬೀಳುತ್ತಿದ್ದುದನ್ನು ಕಂಡ ಆ ಪ್ರದೇಶದ ಒಬ್ಬ ಗಾರ್ಡ್ ಸಂದೀಪ್ ನ ಮನೆಗೆ ತೆರಳಿ ವಿಷಯ ತಿಳಿಸಿದ್ದ.
ತನ್ನ ತಾಯಿಯ ಸಾವಿನಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಮುಗ್ಧನಂತೆ ನಟಿಸಿದ್ದ ಮಗ ಸಂದೀಪ್, ತಾಯಿ ಟೆರೇಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದು ಸತ್ತ ಸಂದರ್ಭದಲ್ಲಿ ತಾನು ಅಲ್ಲಿ ಇರಲೇ ಇಲ್ಲ ಎಂದು ಹೇಳಿಕೊಂಡಿದ್ದ.
ಟೆರೇಸ್ ಮೇಲೆ ಪೂಜೆ ಸಲ್ಲಿಸಲು ತನಗೆ ನೀರು ತಂದುಕೊಡು ಎಂದು ತನ್ನ ತಾಯಿಗೆ ತನಗೆ ಹೇಳಿದ ಪ್ರಕಾರ ತಾನು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದೆ; ಹಾಗೆ ಹೋಗುವಾಗ ತಾಯಿಯ ಚಪ್ಪಲಿಯನ್ನು ಧರಿಸಿಕೊಂಡು ಹೋಗಿದ್ದೆ; ಆ ಹೊತ್ತಿನಲ್ಲೇ ಅವರು ಆಕಸ್ಮಿಕವಾಗಿ ಟೆರೇಸ್‌ನಿಂದ ಕೆಳಗೆ ಬಿದ್ದು ಸತ್ತಳು ಎಂದು ಸಂದೀಪ್ ಹೇಳಿದ್ದ. ಆದರೆ ಸಿಸಿಟಿವಿಯಲ್ಲಿ ಆತನ ಕೊಲೆ ಕೃತ್ಯ ದಾಖಲಾಗಿತ್ತು.
ತಾಯಿ ಜಯಶ್ರೀ ಬೆನ್ ಅವರಿಗೆ ಈಚೆಗೆ ಬ್ರೇನ್ ಹ್ಯಾಮೋರೇಜ್ ಆಗಿತ್ತು. ತನ್ನ ಅನಾರೋಗ್ಯದ ಪ್ರಯುಕ್ತ ಆಕೆ ಸಹಜವಾಗಿಯೇ ಮನೆಯವರಿಗೆ ಕಿರಿಕಿರಿ ಮಾಡುತ್ತಿದ್ದಳು.
ಜಯಶ್ರೀ ಅವರಿಗೆ ಸಂದೀಪ್ ಏಕೈಕ ಪುತ್ರ; ಆತನಿಗೆ ಇಬ್ಬರು ಹೆಣ್ಣು ಮಕ್ಕಳು; ಅದರಲ್ಲಿ ಒಬ್ಟಾಕೆಗೆ ಈಚೆಗೆ ಮದುವೆಯಾಗಿದೆ.