Advertisement

ಕೆಲವೊಮ್ಮೆ ನಿರೀಕ್ಷೆ ತಪ್ಪಾಗುತ್ತೆ, ಎಲ್ಲದೈವಿಚ್ಛೆ: ಬಿಎಸ್‌ವೈ

03:36 PM May 22, 2018 | Team Udayavani |

ದಾವಣಗೆರೆ: ಚುನಾವಣೆಯಲ್ಲಿ ಕೆಲವೊಮ್ಮೆ ನಿರೀಕ್ಷೆಗಳು ತಪ್ಪಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನುಡಿದರು.

Advertisement

ವಿಶ್ವಾಸ ಮತಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರಿಂದ ತೀವ್ರ ಮನನೊಂದು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಎಚ್‌. ಚನ್ನಬಸಪ್ಪ ಎಂಬುವವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲು ಸೋಮವಾರ ಆಗಮಿಸಿದ್ದ ಸಂದರ್ಭದಲ್ಲಿ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿಯ ಮಿಷನ್‌ 150+ ವಿಫಲಕ್ಕೆ ಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ 118 ಸ್ಥಾನದವರೆಗೆ ಬಂದು ಕೊನೆಗೆ 104 ಸ್ಥಾನ ಲಭಿಸಿದವು. ಬಹುಮತಕ್ಕೆ 8 ಸ್ಥಾನ ಕಡಿಮೆ ಹೊಂದಿದ್ದೇವೆ. ನಾವು 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. 15ಕ್ಕೂ ಹೆಚ್ಚು ಕಡೆ ಅತಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ.

ಚುನಾವಣೆಯಲ್ಲಿ ಇದೆಲ್ಲ ಸಾಮಾನ್ಯ. ನಿರೀಕ್ಷೆ ತಪ್ಪಾಗುತ್ತೆ. ನಮಗೆ 135 ಸ್ಥಾನ ಬರಬಹುದು ಎಂಬ ನಿರೀಕ್ಷೆ ಇತ್ತು. 118ಕ್ಕೆ ಹತ್ತಿರ ಹತ್ತಿರ ಬಂದಿದ್ದೆವು. ಯಾಕೋ ಆಗಲಿಲ್ಲ. ಎಲ್ಲವೂ ದೈವಿಚ್ಛೆ ಎಂದರು. ಸಮ್ಮಿಶ್ರ ಸರ್ಕಾರದ ಪ್ರಾರಂಭದಲ್ಲೇ ಮಂತ್ರಿ ಸ್ಥಾನಕ್ಕೆ ಕಿತ್ತಾಟ ಪ್ರಾರಂಭವಾಗಿದೆಯೆಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಈಗಲೇ ಟೀಕೆ-ಟಿಪ್ಪಣಿ ಮಾಡುವುದಿಲ್ಲ ಎಂದಷ್ಟೆ ಪ್ರತಿಕ್ರಿಯಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಕೆ. ಮಾಡಾಳ್‌ ವಿರುಪಾಕ್ಷಪ್ಪ, ಮುರುಗೇಶ್‌ ನಿರಾಣಿ, ಪ್ರೊ| ಎನ್‌. ಲಿಂಗಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next