Advertisement

Someshwara ಪುರಸಭೆ ಬಿಜೆಪಿ ತೆಕ್ಕೆಗೆ; ಸ್ಪಷ್ಟ ಬಹುತದೊಂದಿಗೆ ಬಿಜೆಪಿ ಅಧಿಕಾರಕ್ಕೆ

11:44 AM Dec 30, 2023 | Team Udayavani |

ಉಳ್ಳಾಲ: ಸೊಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯ 16 ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಚೊಚ್ಚಲ ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದು, ಕಾಂಗ್ರೆಸ್ 7 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

Advertisement

ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ನಡೆಸಿದ್ದ ಕಾಂಗ್ರೆಸ್ 7 ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ್ದ 3ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸಿಪಿಐಎಂ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಯ ಎದುರು ಸೋಲನ್ನನುಭವಿಸಿದ್ದಾರೆ.

ಸೋಮೇಶ್ವರ ಪುರಸಭೆಗೆ ಡಿ. 27ರಂದು ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಿಗೆ 50 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 18 ಕಡೆಗಳಲ್ಲಿ ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದ್ದರೆ, ಒಂದು ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸಿಪಿಐಎಂ ಅಭ್ಯರ್ಥಿ ನೇರ ಸ್ಪರ್ಧೆಯಲ್ಲಿದ್ದರು. ನಾಲ್ಕು ವಾರ್ಡ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐಎಂ, ಆಮ್ ಆದ್ಮಿ ಪಾರ್ಟಿಯಲ್ಲಿ ಸೋಷಿಯಲ್ ವಲ್ಫೇರ್‌ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದರು.

ಚೀಟಿ ಎತ್ತುವ ಮೂಲಕ ಕಾಂಗ್ರೆಸ್ ಗೆ ಜಯ: ಪುರಸಭೆಯ 13ನೇ ಕುಂಪಲ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಪಿಲಾರ್ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ ಕುಮಾರ್ ಕೆ.ಎಸ್. 247 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದು, ಮತ ಎಣಿಕೆ ಮುಗಿದ ಬಳಿಕ‌ ನಡೆದ ಟಾಸ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಪಿಲಾರ್ ಗೆಲುವನ್ನು ಸಾಧಿಸಿದರು.

Advertisement

1 ಕಾಂಗ್ರೆಸ್ ಹಾಮೀನ ಬಶೀರ್
2 ಬಿಜೆಪಿ ಯಶವಂತ್
3 ಬಿಜೆಪಿ ಸ್ವಪ್ನ ಶೆಟ್ಟಿ
4 ಕಾಂಗ್ರೆಸ್ ಪುರುಷೋತ್ತಮ್ ಶೆಟ್ಟಿ
5 ಬಿಜೆಪಿ ಜಯ ಪೂಜಾರಿ
6 ಬಿಜೆಪಿ ಮಾಲತಿ ನಾಯ್ಕ್
7 ಬಿಜೆಪಿ ಕಮಲಾ ನಾಯಕ್
8 ಬಿಜೆಪಿ ಮೋಹನ್ ಶೆಟ್ಟಿ
9 ಕಾಂಗ್ರೆಸ್ ಪರ್ವಿನ್ ಶಾಜಿದ್
10 ಬಿಜೆಪಿ ಮನೋಜ್ ಕಟ್ಟೆಮನೆ
11 ಬಿಜೆಪಿ ಹರೀಶ್ ಕುಂಪಲ
12 ಬಿಜೆಪಿ ಸುಗಂಧಿ
13 ಕಾಂಗ್ರೆಸ್ ದೀಪಕ್ ಪಿಲಾರ್
14 ಬಿಜೆಪಿ ಅಮಿತಾ
15 ಬಿಜೆಪಿ ಸೋನಾ ಶುಭಾಷಿನಿ
16 ಬಿಜೆಪಿ ಅನಿಲ್ ಕೊಲ್ಯ
17 ಬಿಜೆಪಿ ಪುರುಷೋತ್ತಮ್ ಗಟ್ಟಿ
18 ಬಿಜೆಪಿ ರವಿಶಂಕರ್‌ ಸೋಮೇಶ್ವರ
19 ಶ್ರೀಲತಾ ದಿನೇಶ್ ಗಟ್ಟಿ
20 ಕಾಂಗ್ರೆಸ್ ಅಬ್ದುಲ್ ಸಲಾಂ
21 ಕಾಂಗ್ರೆಸ್ ರಮ್ಲತ್
22 ಕಾಂಗ್ರೆಸ್ ತಾಹಿರಾ
23 ಬಿಜೆಪಿ ಜಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next